






ರೂ.9 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ – 2028 ಕ್ಕೆ ಬ್ರಹ್ಮಕಲಶೋತ್ಸವ



ಪುತ್ತೂರು: ಇತಿಹಾಸ ಪ್ರಸಿದ್ಧ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ಅತ್ಯಂತ ಭಕ್ತಿಪೂರ್ವಕವಾಗಿ ಜೂ.18 ರಂದು ಚಾಲನೆ ನೀಡಲಾಯಿತು. ನೂತನ ಗರ್ಭಗುಡಿಯ ಶಿಲಾ ಪೂಜೆ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಕಾರ್ಯಕ್ರಮ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ರಾವ್ರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವಾಸ್ತು ಶಿಲ್ಪಿ ಎಸ್.ಎಂ ಪ್ರಸಾದ ಮುನಿಯಂಗಳ, ಶಿಲ್ಪಿ ರವಿಚಂದ್ರ ವಿ. ಕಾರ್ಕಳರವರ ಉಪಸ್ಥಿತಿಯಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು. ಆರಂಭದಲ್ಲಿ ದೇವತಾ ಪ್ರಾರ್ಥನೆ ನಡೆದು ಬಳಿಕ ನೂತನ ಗರ್ಭಗುಡಿಯ ಶಿಲಾ ಪೂಜೆ ಬಳಿಕ ಜೀರ್ಣೋದ್ಧಾರ ಹುಂಡಿಗೆ ಲಕ್ಷ್ಮೀಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ಅರ್ಚಕ ಗಣೇಶ್ ಭಟ್ ಮಾಡಾವು ಮತ್ತು ಕಿಶೋರ್ ಅರ್ತ್ಯಡ್ಕರವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು, ಊರಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.




ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಇಳಂತಾಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಅಶೋಕ್ ರೈ ದೇರ್ಲ, ಉಮಾಕಾಂತ ಬೈಲಾಡಿ, ಜಲಜಾಕ್ಷಿ ರೈ, ದಾಮೋದರ ಪೂಜಾರಿ ಕೆಂಗುಡೇಲು, ಸುಜಯ, ಹರಿನಾಥ ಇಳಂತಾಜೆ, ಅರ್ಚಕ ಶ್ರೀನಿವಾಸ ರಾವ್, ಚಂದ್ರಶೇಖರ ಪೂಜಾರಿ ಕಣಿಯಾರು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಡಾ. ಹರ್ಷ ಕುಮಾರ್ ರೈ ಮಾಡಾವು, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಚೆನ್ನಪ್ಪ ರೈ ದೇರ್ಲ, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ದಿವಾಕರ ರೈ ಸಣಂಗಳ, ಈಶ್ವರ ಕುಲಾಲ್, ಶ್ರೀಧರ ಗೌಡ ಎರಕ್ಕಳ, ರಾಮಣ್ಣ ಗೌಡ ಜ್ಯೋತಿ ನಿಲಯ, ಬಾಲಕೃಷ್ಣ ರೈ ಮಾಡಾವು, ಸುಬ್ರಾಯ ಗೌಡ, ಪ್ರವೀಣ್ ಶೆಟ್ಟಿ ಕೂಡೇಲು, ಬೈಲುವಾರು ಸಮಿತಿ ಅಧ್ಯಕ್ಷರುಗಳಾದ ಮೋಹನ ರೈ ಬೇರಿಕೆ, ಶ್ರೀಪತಿ ಭಟ್ ದೇವಿನಗರ, ಬೇಬಿ ಪೂಜಾರಿ, ಚಂದ್ರಹಾಸ ರೈ ಮಠ, ಕೃಷ್ಣ ಪ್ರಸಾದ್ ರೈ ಕಣಿಯಾರು, ರವೀಂದ್ರ ಪೂಜಾರಿ ಕಣಿಯಾರು, ಹರೀಶ್ ನಾಯ್ಕ ಕಣಿಯಾರು, ಕರುಣಾಕರ ರೈ ಸಣಂಗಳ ಹಾಗೂ ಪದಾಧಿಕಾರಿಗಳು ಹಾಗೇ ನಳೀಲು ಸಂತೋಷ್ ಕುಮಾರ್ ರೈ, ಶರತ್ ರೈ ಕಾವು, ರಾಜೀವ ರೈ ಕುತ್ಯಾಡಿ, ರಾಮದಾಸ್ ರೈ ಮದ್ಲ, ಲಕ್ಷ್ಮೀನಾರಾಯಣ ಶೆಟ್ಟಿ ತಿಂಗಳಾಡಿ, ರಾಮಯ್ಯ ರೈ ತಿಂಗಳಾಡಿ, ಪುರಂದರ ರೈ ಮಿತ್ರಂಪಾಡಿ, ಶೀನಪ್ಪ ರೈ ಕೊಡಂಕೀರಿ, ಅರುಣ್ ಕುಮಾರ್ ಆಳ್ವ ಬೋಳೋಡಿ, ದಿನಕರ ರೈ ಮಾಣಿಪ್ಪಾಡಿ, ಪದ್ಮನಾಭ ಭಂಡಾರಿ ಅಂಕತ್ತಡ್ಕ, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು,ವಿಶ್ವನಾಥ ರೈ ಕಳೆಂಜ, ವಿಶ್ವನಾಥ ಪೂಜಾರಿ ಕೆಂಗುಡೇಲು, ಜಯಂತ ಪೂಜಾರಿ ಕೆಂಗುಡೇಲು, ಬಟ್ಯಪ್ಪ ರೈ ದೇರ್ಲ, ಅಮರನಾಥ ರೈ ದೇರ್ಲ, ಶಿವಶ್ರೀರಂಜನ್ ರೈ ದೇರ್ಲ, ವಿಶ್ವನಾಥ ಶೆಟ್ಟಿ ಸಾಗು, ಪ್ರಮೀತ್ರಾಜ್ ಕಟ್ಟತ್ತಾರು, ವಿಠಲ ರೈ ಪೊಯ್ಯೊಳೆ, ಶೀನಪ್ಪ ರೈ ದೇವಿನಗರ, ರಾಮಕೃಷ್ಣ ಭಟ್ ಮೇರ್ಲ, ಗಣೇಶ್ ಭಟ್ ಕೈತಡ್ಕ, ಕೃಷ್ಣ ಭಟ್ ಸಣಂಗಳ, ಕೃಷ್ಣ ಸಾಮಾನಿ, ಬೈಲಮೂಲೆ ಗೋಪಿನಾಥ ರೈ, ಗಣೇಶ್ ದೇವಿನಗರ, ಆನಂದ ದೇವಿನಗರ, ಮಧುಸೂದನ ಭಟ್ ಕಜೆಮೂಲೆ, ಜೀರ್ಣೋದ್ಧಾರ ಸಮಿತಿ ಕಛೇರಿ ಸಿಬ್ಬಂದಿಗಳಾದ ಚಂದ್ರಶೇಖರ ರೈ, ಜಯಕಾಂತ, ಕವಿತಾ ಸೇರಿದಂತೆ ನೂರಾರು ಉಪಸ್ಥಿತರಿದ್ದರು.

9 ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ಧಾರ
ಅತ್ಯಂತ ಕಾರಣಿಕತೆಯ ಕ್ಷೇತ್ರವಾಗಿರುವ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ಶ್ರೀ ಕ್ಷೇತ್ರವು ಸುಮಾರು 9 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಳ್ಳಲಿದೆ. ಊರ ಪರವೂರ ಭಕ್ತಾಧಿಗಳ, ದಾನಿಗಳ, ಗ್ರಾಮಸ್ಥರ ಸಹಕಾರದೊಂದಿಗೆ ಜೀರ್ಣೋದ್ದಾರ ಕಾರ್ಯ ನಡೆಯಲಿದ್ದು ಈಗಾಗಲೇ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಭಕ್ತಾಧಿಗಳು, ದಾನಿಗಳು, ಗ್ರಾಮಸ್ಥರು ಅತ್ಯಂತ ಶ್ರದ್ದಾಭಕ್ತಿಯಿಂದ ಧನ ಸಹಾಯದ ಸಹಾಯ ಹಸ್ತ ನೀಡಿದ್ದು ಇದು ಇಲ್ಲಿನ ಶ್ರೀ ದೇವಿಯ ಕಾರಣಿಕತೆಯನ್ನು ಎತ್ತಿ ತೋರಿಸುತ್ತಿದೆ.
ದೇವಳ ಈ ರೀತಿಯಾಗಿ ಜೀರ್ಣೋದ್ದಾರಗೊಳ್ಳಲಿದೆ
ಒಂದು ಕಾಲದಲ್ಲಿ ದಟ್ಟ ಕಾನನದ ಮಧ್ಯೆ ನೆಲೆಯಾಗಿ ಭಕ್ತರಿಗೆ ಅಭಯ ನೀಡುತ್ತಿದ್ದ ಶ್ರೀ ದೇವಿಯ ದೇವಸ್ಥಾನವು ಅತ್ಯಂತ ಪುರಾತನ ದೇವಳಗಳಲ್ಲಿ ಒಂದಾಗಿದೆ. ಬಹಳ ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿತ್ತು ಇದೀಗ ವರ್ಷಗಳ ಬಳಿಕ ಶ್ರೀ ಕ್ಷೇತ್ರವು ಸಂಪೂರ್ಣ ಜೀರ್ಣೋದ್ದಾರಗೊಂಡು ಕಂಗೊಳಿಸಲಿದೆ. ವಿಶೇಷವಾಗಿ ಶ್ರೀ ದೇವಿಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತು ಪೌಳಿ, ಧ್ವಜಸ್ತಂಭ, ನಾಗದೇವರ ಮತ್ತು ದೈವಗಳ ಗುಡಿ ಇದಲ್ಲದೆ ಪಾಕಶಾಲೆ ಮತ್ತು ಭೋಜನ ಶಾಲೆ ನಿರ್ಮಾಣಗೊಳ್ಳಲಿದೆ.
ಶ್ರೀ ದೇವಿಯ ಅನುಗ್ರಹ, ಭಕ್ತಾಧಿಗಳ ಸಹಕಾರ
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಅಡಿ ಇಟ್ಟಾಗಲೇ ಶ್ರೀ ದೇವಿಯ ಅನುಗ್ರಹದೊಂದಿಗೆ ಭಕ್ತಾಧಿಗಳ ಸಹಕಾರ ಉತ್ತಮ ರೀತಿಯಲ್ಲಿ ಕಂಡು ಬಂದಿದೆ. ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಇಳಂತಾಜೆ ಹಾಗೂ ಸಮಿತಿಯ ಸರ್ವರ ಸಹಕಾರದೊಂದಿಗೆ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ನಡೆದ ಜೀರ್ಣೋದ್ಧಾರದ ಪ್ರಥಮ ಸಭೆಯಲ್ಲಿ ಸುಮಾರು ೩ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವಾಗ್ದಾನ ಭಕ್ತರಿಂದ ಕಂಡು ಬಂದಿರುವುದು ಜನರು ಶ್ರೀ ಕ್ಷೇತ್ರದ ಮೇಲೆ ಇಟ್ಟಿರುವ ಭಕ್ತಿಯ ಪ್ರತೀಕವಾಗಿತ್ತು.
2028ರಲ್ಲಿ ಅದ್ಧೂರಿ ಬ್ರಹ್ಮಕಲಶೋತ್ಸವ
ಶ್ರೀ ದೇವಿಯ ಅನುಗ್ರಹದಂತೆ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಬರೋಬ್ಬರಿ ಎರಡು ವರ್ಷಗಳ ಕಾಲ ನಡೆಯಲಿದ್ದು 2028 ರಲ್ಲಿ ಅದ್ಧೂರಿ ಬ್ರಹ್ಮಕಲಶೋತ್ಸವ ನಡೆಯಲಿದೆ.
“ ಊರ ಪರವೂರ ಭಕ್ತಾಧಿಗಳ ಸಹಕಾರದೊಂದಿಗೆ ಶ್ರೀ ಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರವಾಗಲಿದ್ದು ಈಗಾಗಲೇ ಭಕ್ತಾಧಿಗಳು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಾ ಬಂದಿದ್ದಾರೆ. ಕ್ಷೇತ್ರದ ತಂತ್ರಿಗಳಾದ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳರವರ ಉಪಸ್ಥಿತಿಯಲ್ಲಿ ನೂತನ ಗರ್ಭಗುಡಿಯ ಶಿಲಾ ಪೂಜೆ ನೆರವೇರಿಸುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ 2028 ರಲ್ಲಿ ಶ್ರೀ ದೇವಿಯ ಅನುಗ್ರಹದಂತೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಭಕ್ತರ, ದಾನಿಗಳ ಸಹಕಾರ ಶ್ರೀ ಕ್ಷೇತ್ರದ ಮೇಲಿರಲಿ.”
ಎ.ಕೆ ಜಯರಾಮ ರೈ,
ಅಧ್ಯಕ್ಷರು ವ್ಯವಸ್ಥಾಪನ ಸಮಿತಿ
“ಸುಮಾರು 9 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ನಡೆಯಲಿದ್ದು ವಿಶೇಷವಾಗಿ ನೂತನ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತು ಪೌಳಿ, ಧ್ವಜಸ್ತಂಭ, ನಾಗದೇವರ ಮತ್ತು ದೈವಗಳಿಗೆ ನೂತನ ಗುಡಿ ನಿರ್ಮಾಣ ಹಾಗೇ ಪಾಕಶಾಲೆ ಮತ್ತು ಸುಸಜ್ಜಿತವಾದ ಭೋಜನ ಶಾಲೆಯ ನಿರ್ಮಾಣ ಆಗಲಿದೆ. ಶ್ರೀ ದೇವಿಯ ಅನುಗ್ರಹದೊಂದಿಗೆ ಭಕ್ತಾಧಿಗಳು ಉತ್ತಮ ರೀತಿಯಲ್ಲಿ ತನು,ಮನ,ಧನ ಸಹಕಾರ ನೀಡುತ್ತಿದ್ದಾರೆ. ಎಲ್ಲರಿಗೂ ಶ್ರೀ ದೇವಿಯ ಆಶೀರ್ವಾದ ಇರಲಿ. ಮುಂದೆಯೂ ತಮ್ಮೆಲ್ಲರ ಸಹಕಾರ ಕ್ಷೇತ್ರದ ಮೇಲಿರಲಿ. ನಾವೆಲ್ಲರೂ ಒಟ್ಟು ಸೇರಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಹೆಜ್ಜೆ ಇಡೋಣ.”
ಸಂತೋಷ್ ಕುಮಾರ್ ಇಳಂತಾಜೆ, ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ










