ಗುಮ್ಮಟಗದ್ದೆ ಒಕ್ಕೂಟದ ತ್ರೈಮಾಸಿಕ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ನಾರಾಯಣ ನಾಯ್ಕ, ಉಪಾಧ್ಯಕ್ಷರಾಗಿ ನಿತ್ಯಾನಂದ ಬೈಲಾಡಿ, ಕಾರ್ಯದರ್ಶಿಯಾಗಿ ಅಶೋಕ ಹೊಸಗದ್ದೆ ಆಯ್ಕೆ

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಗುಮ್ಮಟಗದ್ದೆ ಒಕ್ಕೂಟದ ತ್ರೈಮಾಸಿಕ ಸಭೆ ಮತ್ತು ಒಕ್ಕೂಟದ ನೂತನ ಪದಾಧಿಕಾರಿಗಳ ಸಭೆ ಜೂ.7ರಂದು ನಡೆಯಿತು.

ಒಕ್ಕೂಟದ ಅಧ್ಯಕ್ಷರಾಗಿ ನಾರಾಯಣ ನಾಯ್ಕ ಕುದ್ಕಲ್, ಉಪಾಧ್ಯಕ್ಷರಾಗಿ ನಿತ್ಯಾನಂದ ಬೈಲಾಡಿ, ಕಾರ್ಯದರ್ಶಿಯಾಗಿ ಅಶೋಕ ಹೊಸಗದ್ದೆ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಹೇಮಾವತಿ ಚೆಲ್ಯಡ್ಕ, ಕೋಶಾಧಿಕಾರಿಯಾಗಿ ಪ್ರಭಾಕರ ಆಚಾರ್ಯ ಚೆಲ್ಯಡ್ಕ ಆಯ್ಕೆಯಾದರು. ವಲಯದ ಮೆಲ್ವೀಚಾರಕ ಆದರ್ಶ್ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here