






ಹಿರೇಬಂಡಾಡಿ: ಮಂಜುಶ್ರೀ ಸೇವಾ ಟ್ರಸ್ಟ್, ಮಂಜುಶ್ರೀ ಭಜನಾ ಮಂದಿರ ಹಾಗೂ ಜೀರ್ಣೋದ್ಧಾರ ಸಮಿತಿ ಶಿವನಗರ ಹಿರೇಬಂಡಾಡಿ ಇದರ ವತಿಯಿಂದ ಹಿರೇಬಂಡಾಡಿ ಗ್ರಾಮದ ಶಿವನಗರದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಭಜನಾ ಮಂದಿರಕ್ಕೆ ಭೂಮಿ ಪೂಜೆ ಜೂ.18ರಂದು ನಡೆಯಿತು.



ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯ ಪೂಜಾ ವಿಧಿವಿಧಾನ ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ ಆದ ಮಾಜಿ ಶಾಸಕ ಸಂಜೀವ ಮಠಂದೂರು ಭೂಮಿ ಪೂಜೆ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಜೀವ ಮಠಂದೂರು, ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ಮಂಜುಶ್ರೀ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಮಾಧವ ಹೆನ್ನಾಳ, ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಪಡ್ಯೊಟ್ಟು, ಉಪ್ಪಿನಂಗಡಿ ವ್ಯವಸಾಯಿಕ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಸುನಿಲ್ ದಡ್ಡು, ಭಜನಾ ಮಂದಿರದ ಅಧ್ಯಕ್ಷರಾದ ಚಂದ್ರಶೇಖರ ನಾಕ್ ಮುರದಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಸುಧಾಕರ ಕಜೆ ಸ್ವಾಗತಿಸಿ, ಸತೀಶ್ ಶೆಟ್ಟಿ ಹೆನ್ನಾಳ ವಂದಿಸಿದರು. ಸೋಮೇಶ್ ಕೇಪುಳು ಕಾರ್ಯಕ್ರಮ ನಿರೂಪಿಸಿದರು. ವಾಸ್ತುತಜ್ಞರಾದ ಜಗನ್ನಿವಾಸ ರಾವ್, ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ಪ್ರಮುಖರಾದ ಪ್ರತಾಪ್ ಪೆರಿಯಡ್ಕ, ಜನಾರ್ದನ ಗೌಡ ಶಾಂತಿತ್ತಡ್ಡ, ದೇವಪ್ಪ ಪೂಜಾರಿ ಪಡ್ಪು, ವಿನೋದ್ ಬೊಂಟ್ರಪಾಲ್, ವಿಶ್ವನಾಥ ಕೆಮ್ಮಾಟೆ, ದೇವಿಪ್ರಸಾದ್ ರೈ, ಸುಧಾಕರ ಕಜೆ, ರವೀಂದ್ರ ಪಟಾರ್ತಿ, ನಾರಾಯಣ ಕನ್ಯಾನ, ಸತೀಶ್ ಶೆಟ್ಟಿ ಹೆನ್ನಾಳ, ಶಿವಚಂದ್ರ ನಿಡ್ಡೆಂಕಿ, ಮಂಜುಶ್ರೀ ಸೇವಾಟ್ರಸ್ಟ್‌ನ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ಮಹಿಳಾ ಭಜನಾ ಮಂಡಳಿ ಸದಸ್ಯರು, ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ಸದಸ್ಯೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.










