ಜೆಡ್ಡು ಆಯುರ್ವೇದ ಆರೋಗ್ಯಾಲಯ ಶುಭಾರಂಭ

0

ಪುತ್ತೂರು: ಆಯುರ್ವೇದ ಕ್ಷೇತ್ರದಲ್ಲಿ ಹಲವು ವರ್ಷಗಳ ಉತ್ತಮ ಸೇವೆ ನೀಡುತ್ತಾ ಹೆಸರುವಾಸಿಯಾಗಿ ವಿಟ್ಲದ ಅಳಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಡ್ಡು ಆಯುರ್ವೇದ ಆಸ್ಪತ್ರೆ ವತಿಯಿಂದ ಪುತ್ತೂರಿನ ಕ್ಲಿನಿಕ್ ಜೆಡ್ಡು ಆಯುರ್ವೇದ ಅರೋಗ್ಯಾಲಯ ಜೂ.19ರಂದು ಎಪಿಎಂಸಿ ರಸ್ತೆಯ ತ್ರಿನೇತ್ರ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿ ಶುಭಾರಂಭಗೊಂಡಿತ್ತು.


ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಜೆಡ್ಡು ಕುಟುಂಬದವರು ಆಯುರ್ವೇದ ವೈದ್ಯಕೀಯ ಪದ್ದತಿಯಲ್ಲಿ ಹಲವು ತಲೆ ಮಾರುಗಳಿಂದ ಚಿಕಿತ್ಸೆ ನೀಡುತ್ತಾ ಬಂದಿರುತ್ತಾರೆ. ವಿವಿಧ ಕಡೆ ತಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಿ, ಅಲ್ಲಿ ಜನರಿಗೆ ಉತ್ತಮ ಚಿಕಿತ್ಸೆಗಳನ್ನು ನೀಡುವ ಮೂಲ ಅವರ ಕುಟುಂಬವೇ ಸಮಾಜದ ಆಸ್ತಿಯಾಗಿದೆ. ನನ್ನಲ್ಲಿದ್ದ ಆರೋಗ್ಯ ಸಮಸ್ಯೆಯು ಆಯುರ್ವೇದ ಚಿಕಿತ್ಸೆಯ ಮೂಲಕ ಗುಣಮುಖವಾಗಿದೆ. ಎಲ್ಲಾ ವಿಧದ ಆಯೋಗ್ಯ ಸಮಸ್ಯೆಗಳಿಗೂ ಚಿಕಿತ್ಸಾ ವಿಧಾನಗಳು ಇವರಲ್ಲಿದ್ದು ಕ್ಲಿನಿಕ್ ಮೂಲಕ ಎಲ್ಲಾ ವರ್ಗದ ಉಪಯೋಗವಾಗಲಿ ಎಂದು ಹೇಳಿದರು.


ಸುಶ್ರುತ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ರವಿಶಂಕರ್ ಪೆರ್ವಾಜೆ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ದೇಶದಲ್ಲಿ ೪೦ನೇ ರ್‍ಯಾಂಕ್ ಪಡೆದಿದ್ದರೂ ಆಯುರ್ವೇದ ವಿಭಾಗವನ್ನು ನೆಚ್ಚಿಕೊಂಡು ಉತ್ತಮ ಧ್ಯಯನ ಮಾಡಿ ಇದೀಗ ಪುತ್ತೂರಿನಲ್ಲಿ ಕ್ಲಿನಿಕ್ ಪ್ರಾರಂಭಿಸಿರುವು ಪುತ್ತೂರಿನ ಜನತೆ ಭಾಗ್ಯ. ಈ ಕ್ಷೇತ್ರದಲ್ಲಿ ಉತ್ತಮ ಸೇವಾ ಕಾರ್ಯದ ಮೂಲಕ ಯಶಸ್ಸು ದೊರೆಯಲಿ ಎಂದರು.


ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್‌ನ ಆಡಳಿತ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ಮಾತನಾಡಿ, ಉತ್ತಮ ಪರಿಶ್ರಮದ ಮೂಲಕ ಆಯುರ್ವೇದ ವೈದ್ಯಕೀಯ ವಿಭಾಗವನ್ನು ಆಧ್ಯಯನ ಮಾಡಿದ ಆತ್ರೇಯ ನಾರಾಯಣ ಅವರು ತಾನು ಕಲಿತದನ್ನು ಸಮಾಜಕ್ಕೆ ಅರ್ಪಣೆಯಾಗಲಿ. ವೃತ್ತಿಯು ಉನ್ನತವಾಗಿ ನಡೆಯಲಿ. ನಿಮ್ಮ ಮುಖಾಂತರ ಆಯುರ್ವೇದ ಕ್ಷೇತ್ರವು ಪುತ್ತೂರಿನಲ್ಲಿ ಇನ್ನಷ್ಟು ಪ್ರಕಾಶಮಾನವಾಗಲಿ ಎಂದರು.
ಅರ್ಚಕ ಪ್ರಸಾದ ಭಟ್ ಮಾತನಾಡಿ, ಜೆಡ್ಡು ಆಯುರ್ವೇದಿಕ್ ಸಂಸ್ಥೆಯ ಮೂಲಕ ಎಲ್ಲಾ ರೀತಿಯ ಚಿಕಿತ್ಸೆಗಳು ಫಲಪ್ರದವಾಗಿ ನಡೆಯಲಿ. ಜನರಿಗೆ ಉತ್ತಮ ಆರೋಗ್ಯ ದೊರೆತು ವೃತ್ತಿಯಲ್ಲಿ ಅಭಿವೃದ್ಧಿ ಕಾಣುವಂತಾಗಲಿ ಎಂದು ಆಶಿಸಿದರು.


ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಮಸ್ಟರ್ ಪ್ಲಾನರಿಯ ಎಸ್.ಕೆ ಆನಂದ್, ಸಂಶೋಧಕ ಕೇಶವ ಪ್ರಸಾದ್, ಹಿರಿಯ ಲೇಖಕ ಶಂಕರ್ ಸಾರಡ್ಕ, ಡಾ.ಆತ್ರೇಯ ನಾರಾಯಣ ಅವರ ಅಜ್ಜ ನಾರಾಯಣ ಭಟ್, ಅಜ್ಜಿ ಸರಸ್ವತಿ ಅಹಿತ ಹಲವು ಮಂದಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗಷಪತಿ ಭಟ್ ಸ್ವಾಗತಿಸಿದರು. ಡಾ. ಆತ್ರೇಯ ನಾರಾಯಣ ವಂದಿಸಿದರು.


ಬಂಜೆತನ, ಸಕ್ಕರೆ ಕಾಯಿಲೆ, ಬೊಜ್ಜು, ಥೈರಾಯ್ಡ್ ಮತ್ತು ಹಾರ್ಮೋನ್ ಅಸಮತೋಲನ, ಕೀಲು, ಕೂದಲು ಮತ್ತು ಚರ್ಮದ ಸಮಸ್ಯೆಗಳು, ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳು, ಅಸ್ತಮಾ, ಅಲರ್ಜಿ, ಆಟಿಸಂ ಮತ್ತಿತರ ರೋಗಗಳಿಗೆ ಆಯುರ್ವೇದ ವಿಧಾನಗಳಲ್ಲಿ ಚಿಕಿತ್ಸೆ, ಕಡಿಮೆಯಾಗದ ನೋವುಗಳನ್ನು ಸುಟ್ಟುಹಾಕುವ ಚಿಕಿತ್ಸೆಯಾದ ಅಗ್ನಿಕರ್ಮ', ಹಾರ್ಮೋನ್ ಸಮತೋಲನಕ್ಕಾಗಿವಿದ್ಧಕರ್ಮ’, ರಕ್ತದ ಮೂಲಕ ಹಾನಿಕಾರಕ ಅಂಶಗಳನ್ನು ಹೊರಹಾಕಲು ರಕ್ತ ಮೋಕ್ಷಣ', ದೇಹದ ಶಕ್ತಿಕೇಂದ್ರಗಳನ್ನು ಜಾಗೃತಗೊಳಿಸುವ ಚಿಕಿತ್ಸೆಯಾದಮರ್ಮ ಚಿಕಿತ್ಸೆ’, ಆಯುರ್ವೇದದ ಪ್ರಾಚೀನ ಸಿದ್ಧಾಂತಗಳ ಆಧಾರದಲ್ಲಿ `ಮನೋರೋಗ ಚಿಕಿತ್ಸೆ’ ವಿಧಾನಗಳ ಮೂಲಕ ಇಲ್ಲಿ ಚಿಕಿತ್ಸೆ ದೊರೆಯಲಿದೆ.


ಮಂಗಳವಾರ ರಜಾದಿನವಾಗಿದ್ದು, ಉಳಿದ ದಿನಗಳಲ್ಲಿ ಬೆಳಿಗ್ಗೆ 10 ರಿಂದ 1 ರವರೆಗೆ, ಅಪರಾಹ್ನ 4 ರಿಂದ 7 ರವರೆಗೆ ವೈದ್ಯರು ಚಿಕಿತ್ಸೆಗೆ ಲಭ್ಯವಿರಲಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಮೊ: 9880339722 ಸಂಪರ್ಕಿಸುವಂತೆ ಡಾ.ಆತ್ರೇಯ ನಾರಾಯಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here