






ಪುತ್ತೂರು: ಕಾರು ಮಾರಾಟದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಮಾರುತಿ ಸುಝುಕಿ ಕಂಪನಿ ಮಾಂಡೋವಿ ಮೋಟಾರ್ಸ್ ಸಂಸ್ಥೆಯ ಉಪ್ಪಿನಂಗಡಿ, ಕಡಬ, ವಿಟ್ಲ ಶಾಖೆಗಳ ವತಿಯಿಂದ ಎರಡು ದಿನಗಳ ಕಾಲ ನಡೆಯಲಿರುವ ಹಳೆಯ ಕಾರುಗಳ ವಿನಿಮಯ ಮತ್ತು ಖರೀದಿ ಮೇಳವು ಜೂ.19ರಂದು ಕಡಬ, ಉಪ್ಪಿನಂಗಡಿ ಹಾಗೂ ಕಂಬಳಬೆಟ್ಟುಗಳಲ್ಲಿ ನಡೆಯಲಿದೆ.



ಕಡಬ ಜಂಕ್ಷನ್ನಲ್ಲಿರುವ ಕಡಬ ಮಿನಿ ವಿಧಾನ ಸೌಧದ ಬಳಿ, ಉಪ್ಪಿನಂಗಡಿ ಎಚ್.ಎಂ ಅಡಿಟೋರಿಯಂ ಮುಂಭಾಗದ ಹೆಚ್.ಪಿ ಪೆಟ್ರೋಲ್ ಪಂಪ್ ಬಳಿ ಹಾಗೂ ಕಂಬಳಬೆಟ್ಟು ಉರಿಮಜಲುನಲ್ಲಿರುವ ಇಡ್ಕಿದು ಸೇವಾ ಸಹಕಾರಿ ಸಂಘದ ಮುಂಭಾಗದಲ್ಲಿ ವಿನಿಮಯ ಹಾಗೂ ಖರೀದಿ ಮೇಳ ನಡೆಯುತ್ತಿದೆ.




ಏನಿದು ವಿನಿಮಯ, ಖರೀದಿ:
15 ವರ್ಷಗಳಿಗಿಂತಲೂ ಹಳೆಯದಾದ ಯಾವುದೇ ಮೊಡೆಲ್ನ, ಯಾವುದೇ ಕಂಪನಿಯ ಯಾವುದೇ ಕಾರುಗಳನ್ನು ಕೇಂದ್ರ ಸರಕಾರದಿಂದ ಜಾರಿ ಆಗಿರುವ ಸ್ಕಾçಪೇಜ್ ಪಾಲಿಸಿ ಬಳಸಿ ಅತ್ಯಂತ ಹೆಚ್ಚಿನ ಲಾಭವನ್ನು ಗ್ರಾಹಕರಿಗೆ ನೀಡುವ ಯೋಜನೆಯಾಗಿ ವಿನಿಮಯ ಮತ್ತು ಖರೀದಿ ಮೇಳವನ್ನು ಮಂಡೋವಿ ಮೋಟರ್ಸ್ ಆಯೋಜಿಸುತ್ತಿದೆ. ಹಳೆಯ ಕಾರನ್ನು ಮೇಳಕ್ಕೆ ತಂದಾಗ ಆ ಕಾರಿಗೆ ಒಂದು ಆಕರ್ಷಕ ಮೌಲ್ಯದ ಜೊತೆಗೆ ಸ್ಕಾçಪೇಜ್ ಬೋನಸ್ ಕೊಡಲಾಗುವುದು ಮಾತ್ರವಲ್ಲದೇ ಅದೇ ಹಳೆ ಕಾರಿನ ಮ್ಹಾಲಕರು ಹೊಸ ಮಾರುತಿ ಕಾರ್ನ್ನು ಖರೀದಿಸುವಾಗ ಹೊಸ ಕಾರಿನ ರೋಡ್ ಟ್ಯಾಕ್ಸ್ನಲ್ಲಿ ವಿಶೇಷವಾದ ಸ್ಕಾçಪೇಜ್ ಡಿಸ್ಕೌಂಟ್ ದೊರೆಯಲಿದೆ. ಎಲ್ಲಾ ಲಾಭ ಸೇರಿ ಸುಮಾರು ರೂ.1,25,000 ವರೆಗೂ ಈ ಒಂದು ಸ್ಕಾçಪೇಜ್ ಪಾಲಿಸಿ ಗ್ರಾಹಕರಿಗೆ ಉಳಿತಾಯವಾಗಲಿದೆ. ಗ್ರಾಹಕರು 15 ವರ್ಷಗಳ ಮೇಲ್ಪಟ್ಟ ಯಾವುದೇ ಕಂಪನಿಯ ಯಾವುದೇ ಮೋಡೆಲ್ನ ಕಾರುಗಳನ್ನು ಮೇಳಕ್ಕೆ ತಂದು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ 9972468807, 636689644, 8296706798, 9880079238 ನಂಬರ್ಗಳನ್ನು ಸಂಪರ್ಕಿಸುವAತೆ ಮಾಂಡೋವಿ ಮೋಟರ್ಸ್ನ ಪ್ರಕಟಣೆ ತಿಳಿಸಿದೆ.
ಕಾರು ಎಕ್ಸ್ಚೇಂಜ್ ಮಾಡುವವರಿಗೆ ಸುವರ್ಣಾವಕಾಶ
15 ವರ್ಷಗಳಿಗಿಂತಲೂ ಹಳೆಯದಾದ ಯಾವುದೇ ಮೊಡೆಲ್ನ, ಯಾವುದೇ ಕಂಪನಿಯ ಯಾವುದೇ ಕಾರುಗಳನ್ನು ಕೇಂದ್ರ ಸರಕಾರದಿಂದ ಜಾರಿ ಆಗಿರುವ ಸ್ಕ್ರಾಪೇಜ್ ಪಾಲಿಸಿ ಬಳಸಿ ಗ್ರಾಹಕರಿಗೆ ಅತ್ಯಧಿಕ ಲಾಭ ನೀಡುವ ಮಾಂಡೋವಿ ಮೋಟರ್ಸ್ನ ಈ ಮೇಳವು ಹಳೆಯ ಕಾರು ಬದಲಾಯಿಸಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಒಂದು ಸುವರ್ಣಾವಕಾಶವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.










