






ಪುತ್ತೂರು: ಅಗ್ನಿಪಥ್ ನೇಮಕಾತಿಯ ಮೂಲಕ ಭಾರತೀಯ ಭೂ ಸೇನೆಗೆ ಆಯ್ಕೆಯಾದ ಮೊಟ್ಟೆತ್ತಡ್ಕ ಆಶ್ರಯ ಕಾಲೋನಿ ನಿವಾಸಿ ಅಭಿತ್ ಅವರಿಗೆ ದೇವಾಂಗ ಸೇವಾ ಸಮಾಜ (ರಿ.) ಪುತ್ತೂರು ವತಿಯಿಂದ ಸನ್ಮಾನ ಕಾರ್ಯಕ್ರಮ ಜೂ.18 ರಂದು ನಡೆಯಿತು.


ದೇವಾಂಗ ಸಮಾಜದ ಪದಾಧಿಕಾರಿಗಳು ಅಭಿತ್ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ದೇಶ ಸೇವೆಗೆ ಆಯ್ಕೆಯಾದ ಅಭಿತ್ ಅವರ ಸಾಧನೆಗೆ ಸಮಾಜದ ಹಿರಿಯರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿ, ಮುಂದಿನ ಸೇವೆಗೆ ಶುಭ ಹಾರೈಸಿದರು.













