






ನೆಲ್ಯಾಡಿ: ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಇದರ ಶಾಲಾ ಸಂಸತ್ತುಗೆ ಚುನಾವಣೆ ನಡೆಯಿತು.


ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮತ್ತು ಮತದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಸಂಸದೀಯ ಮಾದರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಮತದಾನ ಯಂತ್ರ ಹಾಗೂ ಪ್ರಾಜೆಕ್ಟರ್ ಬಳಸಿ ಮತದಾನ ಪ್ರಕ್ರಿಯೆ ನಡೆಸಿರುವುದು ಈ ಬಾರಿಯ ವಿಶೇಷತೆಯಾಗಿತ್ತು. ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ಅವರು ಮತದಾನಯಂತ್ರದ ವಿನ್ಯಾಸಗೊಳಿಸಿ ವಿದ್ಯಾರ್ಥಿಗಳಿಗೆ ಮತದಾನ ಯಂತ್ರದ ಮಾಹಿತಿ ನೀಡಿದರು. ಬೆಥನಿ ತರಬೇತಿ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಈ ಸಂದರ್ಭದಲ್ಲಿ ಸಹಕರಿಸಿದರು. ಎಲ್ಲಾ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಮತ ಎಣಿಕೆ ಪ್ರಕ್ರಿಯೆ ನಡೆಸಲಾಯಿತು. ಸಂಸ್ಥೆಯ ಸಹ ಸಂಚಾಲಕರಾದ ಡೀಕನ್ ಜಾರ್ಜ್ ಹಾಗೂ ಮುಖ್ಯಗುರು ಪ್ರಕಾಶ್ ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.



ಶಾಲಾ ನಾಯಕನಾಗಿ ವರುಣ್ ಎಂ.ಡಿ, ಉಪನಾಯಕಿಯಾಗಿ ಶ್ರೇಯಾ ಎಂ.ಜೆ ಆಯ್ಕೆಗೊಂಡರು. ಉಳಿದಂತೆ ಸಾಂಸ್ಕೃತಿಕ ಮಂತ್ರಿಯಾಗಿ ಸೃಷ್ಠಿ ಪಿ.ಎಸ್, ಉಪಮಂತ್ರಿಯಾಗಿ ಜಿನ್ಷಾ, ಕ್ರೀಡಾಮಂತ್ರಿಯಾಗಿ ಆಶಿನ್ ಡಿ.ಅನಿಲ್, ಉಪಮಂತ್ರಿಯಾಗಿ ನಿಶಾಂತ್, ಆರೋಗ್ಯ ಮಂತ್ರಿಯಾಗಿ ಎಲೈಷಾ ಜಿನಿ, ಉಪಮಂತ್ರಿಯಾಗಿ ಅನು ಏಂಜಲ್, ಗ್ರಂಥಾಲಯ ಮಂತ್ರಿಯಾಗಿ ಸೋನಿಕಾ ಗೌಡ, ಉಪಮಂತ್ರಿಯಾಗಿ ಅಭಿಷೇಕ್ ಕೆ.ಆರ್., ವಿದ್ಯಾಮಂತ್ರಿಯಾಗಿ ಶ್ರದ್ಧಾ ಕೆ., ಉಪಮಂತ್ರಿಯಾಗಿ ಧನುಷ್, ಸಭಾಪತಿಯಾಗಿ ಶಿಫಾ ಸಂತೋಷ್, ಸಂಸತ್ ಕಾರ್ಯ ಮೇಲುಸ್ತುವಾರಿ ಮಂತ್ರಿಯಾಗಿ ಮೆರ್ಲಿನ್ ಮನೋಜ್ ಆಯ್ಕೆಗೊಂಡರು. ದೈಹಿಕ ಶಿಕ್ಷಣ ಶಿಕ್ಷಕರಾದ ಜಿಮ್ಸನ್ ವರ್ಗೀಸ್ ಚುನಾವಣಾ ಪ್ರಕ್ರಿಯೆ ಮೇಲುಸ್ತುವಾರಿ ವಹಿಸಿದ್ದರು. ಶಿಕ್ಷಕ ಶಿಕ್ಷಕೇತರ ವೃಂದದವರು ಸಹಕರಿಸಿದರು.










