







ಕಾಣಿಯೂರು: ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಬೈತಡ್ಕ ರೇಂಜ್ – 207 ಇದರ ಪ್ರಥಮ ರೇಂಜ್ ಕಾನ್ಫರೆನ್ಸ್ ಬೆಳಂದೂರು ಗ್ರಾಮದ ಪಳ್ಳತ್ತಾರು ತಕ್ವಿಯತುಲ್ ಇಸ್ಲಾಂ ಮದರಸದಲ್ಲಿ ಜೂ 24 ರಂದು ನಡೆಯಿತು.


ಬೈತಡ್ಕ ರೇಂಜ್ ವ್ಯಾಪ್ತಿಯ 12 ಮದ್ರಸಗಳ ಸುಮಾರು ಇಪ್ಪತ್ತೈದು ಮುಅಲ್ಲಿಮ್ ಗಳು ಸಭೆಯಲ್ಲಿ ಭಾಗವಹಿಸಿದ್ದರು.ರೇಂಜ್ ಅಧ್ಯಕ್ಷ ಉಮರುಲ್ ಫಾರೂಕ್ ಸಖಾಫಿ ಬೈತಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಅಶ್ರಫ್ ಹನೀಫಿ ಬೆಳಂದೂರು ಕಿರಾಅತ್ ಪಠಿಸಿ ಪಳ್ಳತ್ತಾರು ಖತೀಬ್ ಶೆರೀಫ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಬೂಬಕರ್ ಸಿದ್ದೀಕ್ ಸಅದಿ ಮೋಡೆಲ್ ತರಗತಿ ನಡಿಸಿಕೊಟ್ಟರು.ಕಿತಾಬ್ ಚರ್ಚೆ ನಾಸಿರ್ ಸಅದಿ ನೆರವೇರಿಸಿದರು.ರಫೀಕ್ ಅಮ್ಜದಿ ಪ್ರಬಂಧ ಮಂಡಸಿದರು.ಬಳಿಕ ರೇಂಜಿನ ಎಲ್ಲಾ ಉಸ್ತಾದರುಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಉಪ್ಪಂಞಿ ಹಾಜಿ ,ಕಾರ್ಯದರ್ಶಿ ಶಂಸುದ್ದೀನ್,ಮದ್ರಸ ಉಸ್ತುವಾರಿಗಳಾದ ನವಾಝ್ ಸಖಾಫಿ, ಇಬ್ರಾಹಿಂ ಹಾಜಿ ಮೊದಲಾದವರು ಉಪಸ್ಥಿತರಿದ್ದರು.ರೇಂಜ್ ಕಾರ್ಯದರ್ಶಿ ಅನ್ಸಾರ್ ಫಾಳಿಲಿ ಕರಿಂಬಿಲ ಸ್ವಾಗತಿಸಿ ವಂದಿಸಿದರು













