ಎನ್.ಎಂ.ಎಂ.ಎಸ್. ವಿದ್ಯಾರ್ಥಿ ವೇತನಕ್ಕೆ ತಿಂಗಳಾಡಿ ಶಾಲಾ ವಿದ್ಯಾರ್ಥಿನಿ ಪ್ರತಿಭಾ ಆಯ್ಕೆ

0

ಪುತ್ತೂರು: 2025-26ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ತಿಂಗಳಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರತಿಭಾ ಎನ್. ಅವರು ಉತ್ತಮ ಸಾಧನೆಗೈದು ತೇರ್ಗಡೆಯಾಗಿದ್ದಾರೆ.

ಪ್ರತಿಭಾ ಅವರು ಪ್ರಸ್ತುತ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ತಿಂಗಳಾಡಿಯ ನಾರಾಯಣ ಮತ್ತು ಕುಸುಮಾರವರ ಪುತ್ರಿಯಾಗಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here