






ಮುಖ್ಯಮಂತ್ರಿ: ಅಮೂಲ್ಯ ಕೆ, ಉಪಮುಖ್ಯಮಂತ್ರಿ: ಫಾತಿಮತ್ ಶಮೀಮ


ಪುತ್ತೂರು : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ತಿಂಗಳಾಡಿಯಲ್ಲಿ ಇತ್ತೀಚೆಗೆ ನಡೆದ ಶಾಲಾ ಮಂತ್ರಿಮಂಡಲದ ಚುನಾವಣೆಯು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಕುತೂಹಲಕರವಾಗಿ ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಚುನಾವಣೆಯಲ್ಲಿ, ವಿದ್ಯಾರ್ಥಿಗಳು ಮೊಬೈಲ್ ಇವಿಎಂ ಬಳಸುವ ಮೂಲಕ ವಿಶಿಷ್ಟವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.



ಚುನಾವಣೆಯ ಫಲಿತಾಂಶದಂತೆ ನೂತನ ಶಾಲಾ ಮಂತ್ರಿಮಂಡಲ ಅಸ್ತಿತ್ವಕ್ಕೆ ಬಂದಿದೆ. ಶಾಲೆಯ ಮುಖ್ಯಮಂತ್ರಿಯಾಗಿ ಅಮೂಲ್ಯ ಕೆ. ಹಾಗೂ ಉಪಮುಖ್ಯಮಂತ್ರಿಯಾಗಿ ಫಾತಿಮತ್ ಶಮೀಮ ಆಯ್ಕೆಯಾಗಿದ್ದಾರೆ.
ನೂತನ ಮಂತ್ರಿಗಳ ಪಟ್ಟಿ ಇಂತಿದೆ: ಶಿಕ್ಷಣ ಮಂತ್ರಿಗಳು: ಫಾತಿಮತ್ ಅಸೀಲ ಮತ್ತು ಫಾತಿಮತ್ ಶಮೀಮ, ಕ್ರೀಡಾ ಮಂತ್ರಿಗಳು: ಸನ್ವಿತ್ ಮತ್ತು ಪಲ್ಲವಿ,ಗೃಹ ಮಂತ್ರಿಗಳು: ಶಶಾಂಕ್ ಮತ್ತು ಗೌತಮ್ ಕುಮಾರ್,ಸಾಂಸ್ಕೃತಿಕ ಮಂತ್ರಿಗಳು: ಹರ್ಷಿತ ಮತ್ತು ಅಮೂಲ್ಯ,ಸ್ವಚ್ಛತಾ ಮಂತ್ರಿಗಳು: ವಿದ್ಯಾಶ್ರೀ ಮತ್ತು ಅಜಿತ್,ಆರೋಗ್ಯ ಮಂತ್ರಿಗಳು: ರೇಷ್ಮಾ ಮತ್ತು ಫಾತಿಮತ್ ರಿಝ,ನೀರಾವರಿ ಮಂತ್ರಿಗಳು: ಸಿಂಚನ್ ಮತ್ತು ಯಶ್,ಗ್ರಂಥಾಲಯ ಮಂತ್ರಿಗಳು: ಶ್ರಾವ್ಯ ಮತ್ತು ಪೂರ್ವಿಕ,ಆಹಾರ ಮಂತ್ರಿಗಳು: ಜಿಸ್ಮಿತಾ ಮತ್ತು ಫಾತಿಮತ್ ಝುಲ್ಪ,ಕೃಷಿ ಮಂತ್ರಿಗಳು: ಕಿರಣ್ ಮತ್ತು ಸುಷ್ಮಾರವರುಗಳು ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಮಂತ್ರಿಮಂಡಲದ ಸದಸ್ಯರಿಗೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದರು. ಈ ಪ್ರಕ್ರಿಯೆಯು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣ ಮತ್ತು ಜವಾಬ್ದಾರಿಯ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.










