






ಲೋಕ ಹಿತವನ್ನು ಭಯಸುವ ಕಾರ್ಯಕ್ರಮ ಇದಾಗಿದೆ: ಮಾಣಿಲ ಶ್ರೀ


ಕ್ಷೇತ್ರ ಬೆಳವಣಿಗೆಯಲ್ಲಿ ಸ್ವಾಮೀಜಿಯವರ ಪಾತ್ರ ಅಪಾರ: ಸತೀಶ್ಚಂದ್ರ ಭಂಡಾರಿ ಕೊಳಾರು



ಎಲ್ಲರ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ: ಡಾ. ಹರೀಶ್ ಬೊಟ್ಟಾರಿ ಚೇವಾರು
ವಿಟ್ಲ: ಲೋಕ ಹಿತವನ್ನು ಭಯಸುವ ಕಾರ್ಯಕ್ರಮ ಇದಾಗಿದೆ. ವಿಶ್ವಶಾಂತಿಗೋಸ್ಕರ ಕ್ಷೇತ್ರದಲ್ಲಿ 48ದಿನಗಳ ಕಾಲ ಓಂ ನಮೋ ಭಗವತೆ ನಮಃ ನಡೆಯಲಿದೆ. ಇತಿಹಾಸದ ಪುಟದಲ್ಲಿ ಶ್ರೀ ಧಾಮ ಸೇರಲಿದೆ. ಶ್ರೀಧಾಮ ಕಳೆದ 27ವರ್ಷಗಳಿಂದ 48 ದಿನಗಳ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯನ್ನು ನಿತ್ಯ ನಿರಂತರವಾಗಿ ಮಾಡುತ್ತಾ ಬಂದಿದೆ. ಈ ಭಾರಿ ಬಹಳಷ್ಟು ವೈಶಿಷ್ಟ್ಯಪೂರ್ಣವಾಗಿ ಕಾರ್ಯಕ್ರಮ ನಡೆಯಲಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯವಸ್ಥಿತವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ಸಮಿತಿ ರಚಿಸಿ ಕಾರ್ಯಕ್ರಮಕ್ಕೆ ಮುಂದಡಿ ಇಡಲಾಗಿದೆ ಎಂದು ಶ್ರೀ ಧಾಮಾ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೀಹನದಾಸ ಪರಮಹಂಸ ಸ್ವಾಮಿಜಿರವರು ಹೇಳಿದರು.

ಅವರು ಜೂ.೨೮ರಂದು ಶ್ರೀ ಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಸದ್ಗುರು ನಿತ್ಯಾನಂದ ವೇದಿಕೆಯಲ್ಲಿ ನಡೆದ ಒಂದು ಮಂಡಲಕಾಲ ನಡೆಯಲಿರುವ ಶ್ರೀ ಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ಲೋಕ ಹಿತವನ್ನು ಬಯಸುವುದು ಸಂತನ ಕರ್ತವ್ಯ, ಧರ್ಮ. ಲೋಕದ ಆಗುಹೋಗು ಸಂತನ ಗೋಚರದಲ್ಲಿ ಇರುತ್ತದೆ. ನಿರ್ಲಿಪ್ತವಾದ ದೇಹ, ಭಾವ, ಸಮರ್ಪಣೆಗೆ ನಾವು ಸಿದ್ದರಾಗಬೇಕು. ಈ ಒಂದು ಕಾರ್ಯಕ್ರಮ ವಿಶ್ವಶಾಂತಿಗಾಗಿ. ಇಲ್ಲಿಯ ಪ್ರಾರ್ಥನೆ ಎಂದೂ ಹುಸಿಯಾಗಿಲ್ಲ. ಶ್ರೀಧಾಮ ಒಂದು ಶಕ್ತಿಯಾಗಿ ನಿಲ್ಲುತ್ತದೆ. ನಮ್ಮ ಬದುಕು ಅರ್ಥ ಪೂರ್ಣವಾಗಿರಲಿ. ಜೀವನದಲ್ಲಿ ಗುರು ಮತ್ತು ಗುರಿ ಅತೀ ಮುಖ್ಯ ಎಂದರು.

ಕ್ಯಾಂಪ್ಕೋ ನಿರ್ದೇಶಕರಾದ ಸತೀಶ್ಚಂದ್ರ ಭಂಡಾರಿ ಕೊಳಾರುರವರು ಮಾತನಾಡಿ ಅಂದು ಕುಗ್ರಾಮವಾಗಿದ್ದ ಮಾಣಿಲ ಇಂದು ಸುಗ್ರಮವಾಗಿದೆ. ಕ್ಷೇತ್ರ ಬೆಳವಣಿಗೆಯಲ್ಲಿ ಸ್ವಾಮೀಜಿಯವರ ಪಾತ್ರ ಅಪಾರ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕಾಲ ಎಲ್ಲರಿಂದ ಆಗಲಿ ಎಂದರು.
ಶ್ರೀ ವರಮಹಾಲಕ್ಷ್ಮೀ ವೃತಾಚರಣೆ ಸಮಿತಿಯ ಅಧ್ಯಕ್ಷರಾದ ಡಾ. ಹರೀಶ್ ಬೊಟ್ಟಾರಿ ಚೇವಾರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕಿದೆ. ಈ ಒಂದು ಕಾರ್ಯಕ್ರಮ ನಮ್ಮೆಲ್ಲರ ಕಾರ್ಯಕ್ರಮವಾಗಬೇಕು. ಬರಡು ಭೂಮಿಯಲ್ಲಿ ಇಂತಹ ಸುಂದರ ಕ್ಷೇತ್ರ ನಿರ್ಮಾಣವಾಗಿದೆ. ಕ್ಷೇತ್ರ ಬೆಳವಣಿಗೆಯ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ನಿತ್ಯ ನಿರಂತರವಾಗಿ ನಡೆಯುತ್ತಿದೆ.
ಬದಿಯಡ್ಕದ ಉದ್ಯಮಿ ಗೋಪಾಲಕೃಷ್ಣ ಪೈ, ಕಡೇಶಿವಾಲಯ ಲಕ್ಷ್ಮೀ ನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಅಮರನಾಥ ಅಜಿಲರು ಆರಿಕಲ್ಲು, ಕಾಟುಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್ ಶೆಟ್ಟಿ ಮಾಯಿಲೆಂಗಿ, ಸಮಿತಿ ಗೌರವಾಧ್ಯಕ್ಷರಾದ ಕಲ್ಯಾಟ್ಟೆ ವೆಂಕಟರಮಣ ಭಟ್, ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ, ಟ್ರಸ್ಟಿ ಚಂದ್ರಶೇಖರ ಮೂಲ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧಾರ್ಮಿಕ ಮುಂದಾಳು ಕೆಯ್ಯೂರು ನಾರಾಯಣ ಭಟ್ ಸ್ವಾಗತಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು.










