ಕರ್ನಾಟಕ ಗಮಕ ಕಲಾ ಪರಿಷತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ಗಮಕ ಕಾರ್ಯಕ್ರಮ

0

ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಜೂ.26ರಂದು ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮವನ್ನು ಅನುರಾಗ ವಠಾರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ, ತೊರವೆ ರಾಮಾಯಣ ಮಹಾಕಾವ್ಯದಿಂದ ಆಯ್ದ ‘ಸೀತಾ ಸ್ವಯಂವರ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು.
ಗಮಕಿ ಮಂಜುಳಾ ಸುಬ್ರಹ್ಮಣ್ಯ ಭಟ್, ಮಂಚಿ ಇವರ ಶಿಷ್ಯೆಯರಾದ ಗಮಕಿ ಕುಮಾರಿ ಸುಪ್ರಜಾ ರಾವ್, ಪುತ್ತೂರು ಇವರು ವಾಚಿಸಿ, ಕುಮಾರಿ ಬ್ರಾಹ್ಮೀ ಎಸ್. ಭಟ್ ಮಂಚಿ ವ್ಯಾಖ್ಯಾನಿಸಿದರು. ಘಟಕದ ಕಾರ್ಯದರ್ಶಿ ಶಂಕರಿ ಶರ್ಮ ಸ್ವಾಗತಿಸಿ, ಕಲಾವಿದರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಘಟಕದ ಉಪಾಧ್ಯಕ್ಷರಾದ ವತ್ಸಲಾ ರಾಜ್ಞಿ ಕಲಾವಿದರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಹಿರಿಯ ಸದಸ್ಯರಾದ ಪ್ರೊ. ಎ.ವಿ. ನಾರಾಯಣ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಚ್ಚುಕಟ್ಟಾಗಿ ನಡೆದ ಗಮಕ ಕಾರ್ಯಕ್ರಮವು ಕಲಾಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು. ಸಹಕಾರ್ಯದರ್ಶಿ ಶ್ರೀಮತಿ ಸುಮನಾ ರಾವ್, ಸದಸ್ಯರಾದ ಚಂದ್ರಶೇಖರ ಆಳ್ವ ಪಡುಮಲೆ ಮುಂತಾದ ಕಲಾಸಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here