ಶಿವಸದನದಲ್ಲಿ ಭಜನಾ ಸೇವೆ

0

ಪುತ್ತೂರು: ಮುರದ ‘ಶಿವಸದನ’ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ವಸತಿ ನಿಲಯದಲ್ಲಿ ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಂಘದ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವಾ ಕಾರ್ಯಕ್ರಮ ನಡೆಯಿತು.

ಸುಶ್ರಾವ್ಯ ಭಜನೆಗಳು ಹಾಗೂ ಮಕ್ಕಳ ಸಂಗೀತ ಕಾರ್ಯಕ್ರಮಗಳು ನಿವಾಸಿಗಳ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ಆಧ್ಯಾತ್ಮಿಕ ಆನಂದವನ್ನು ನೀಡಿದವು. ಸುವರ್ಣ ಲಕ್ಷ್ಮೀನಾರಾಯಣರಾವ್ ಅವರು ಎಲ್ಲ ನಿವಾಸಿಗಳಿಗೆ ಹಣ್ಣು-ಹಂಪಲು ಮತ್ತು ಬಿಸ್ಕೆಟ್ ವಿತರಿಸಿದರು. ಭಜನಾ ಮಂಡಳಿಯವರು ವಿಶೇಷ ಭೋಜನವನ್ನು ಪ್ರಾಯೋಜಿಸಿದ್ದರು. ಟ್ರಸ್ಟಿನ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಆಗಮಿಸಿದ ಭಜನಾ ಮಂಡಳಿಯ ಸದಸ್ಯೆಯರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಕರುಣ ಬೆಳ್ಳೆ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕೋಶಾಧಿಕಾರಿ ದಿನಕರ್ ರಾವ್ ಧನ್ಯವಾದ ಸಲ್ಲಿಸಿದರು.

ಭಜನಾ ಮಂಡಳಿಯ ಅಧ್ಯಕ್ಷೆ ರಾಜೇಶ್ವರಿ ರಾವ್ ಹಾಗೂ ಕಾರ್ಯದರ್ಶಿ ಮಮತಾ ರಾವ್ ಸಂಘದ ಪರವಾಗಿ ಶಿವಸದನಕ್ಕೆ 5,000 ರೂ. ದೇಣಿಗೆ ನೀಡಿದರು. ಶಿವಸದನಕ್ಕೆ ದೇಣಿಗೆ ನೀಡಿ ಸಾಲಮುಕ್ತಗೊಳಿಸಿದ ಪ್ರಭಾ ಪ್ರಭಾಕರ್ ರಾವ್, ಕಾಂತಾವರ, ಉಡುಪಿಯ ವಿದ್ಯಾ ಕಿಶೋರ್ ರಾವ್, ಟ್ರಸ್ಟಿ ಸಂತೋಷ್ ಉಜ್ಜೋಡಿ, ಸತ್ಯನಾರಾಯಣ ರಾವ್, ಶ್ರೀಪತಿ ರಾವ್ ದಂಪತಿ, ವತ್ಸಲಾ ರಾವ್, ಶಿಕ್ಷಕಿಯರು, ಸಿಬ್ಬಂದಿ, ಮ್ಯಾನೇಜರ್ ಮತ್ತು ಮೆಟ್ರನ್ ಸಹಕಾರದೊಂದಿಗೆ ಸಹಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here