






ನಾಯಕಿ ಸಜ್ನಾ ಸಿಝಾ, ಉಪನಾಯಕ ಹರ್ಷ ಎನ್., ಸಭಾಪತಿ ಜಿತೇಶ್ ಕೃಷ್ಣ


ಪುತ್ತೂರು: ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇದರ 2026-27ನೇ ಸಾಲಿನ ಶಾಲಾ ಮಂತ್ರಿಮಂಡಲ, ಪದಗ್ರಹಣ ಸಮಾರಂಭವು ಜೂ.27ರಂದು ಮಾಯ್ ದೆ ದೇವುಸ್ ಸಭಾಂಗಣ ಜರಗಿತು.



ವಾದ್ಯ ವೃಂದದೊಂದಿಗೆ ಅತಿಥಿ ಹಾಗೂ ಮಂತ್ರಿ ಮಂಡಲದ ಸದಸ್ಯರನ್ನು ಸಭಾಂಗಣಕ್ಕೆ ಕರೆತರಲಾಯಿತು. ಅಧ್ಯಕ್ಷತೆ ವಹಿಸಿದ್ದ ಚರ್ಚ್‌ನ ಸಹಾಯಕ ಧರ್ಮಗುರು ವಂ.ಮರ್ವಿನ್ ಪ್ರವಿಣ್ ಲೋಬೊ ದೀಪ ಬೆಳಗಿಸಿ ಚಾಲನೆ ನೀಡಿ, ಶುಭಾಶೀರ್ವದಿಸಿದರು.
ಮಂತ್ರಿಮಂಡಲದಲ್ಲಿ ಆಯ್ಕೆಯಾದ ಶಾಲಾ ನಾಯಕಿ ಸಜ್ನಾ ಸಿಝಾ, ಉಪನಾಯಕ ಹರ್ಷ ಎನ್., ಸಭಾಪತಿ ಜಿತೇಶ್ ಕೃಷ್ಣರವರಿಗೆ ಅಧ್ಯಕ್ಷರು ಶಾಲು ಹಾಕಿ ಗೌರವಿಸಿ, ಶುಭಹಾರೈಸಿದರು. ಮುಖ್ಯ ಶಿಕ್ಷಕಿ ಜಾನೆಟ್ ಡಿಸೋಜ ಮಂತ್ರಿ ಮಂಡಲದ ಕಾರ್ಯವನ್ನು ವಿವರಿಸಿ, ಪ್ರಮಾಣ ವಚನ ಬೋಧಿಸಿದರು.
ಬಳಿಕ ಶಾಲಾ ನಾಯಕಿ ಮಂತ್ರಿ ಮಂಡಲದ ಖಾತೆಗಳನ್ನು ಹಂಚಿಕೆ ಮಾಡಿ ಅವರಿಗೆ ಪ್ರಮಾಣವಚನ ಬೋಧಿಸಿ, ಹಿತನುಡಿಗಳನ್ನಾಡಿದರು.ಶಾಲಾ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.










