







ಪುತ್ತೂರು: ತಾಲೂಕು ಮಟ್ಟದ ಸಂಜೀವಿನಿ ಮಾಸಿಕ ಸಂತೆ ಪುರುಷರಕಟ್ಟೆ ಜಂಕ್ಷನ್ನಲ್ಲಿ ಜೂ.25ರಂದು ನಡೆಯಿತು. ನರಿಮೊಗರು, ಅರಿಯಡ್ಕ, ಬೆಟ್ಟಂಪಾಡಿ, ಕೆದಂಬಾಡಿ, ನಿಡ್ಪಳ್ಳಿ, ಮುಂಡೂರು, ಒಳಮೊಗ್ರು ಮೊದಲಾದ ಸಂಜೀವಿನಿ ಒಕ್ಕೂಟಗಳ ಸುಮಾರು 20 ಜನ ಸದಸ್ಯರು ಭಾಗವಹಿಸಿದ್ದರು.


ಈ ಸಂತೆ ಮಾರುಕಟ್ಟೆಯಲ್ಲಿ ಜೇನುತುಪ್ಪ, ದನದ ತುಪ್ಪ, ಸಪ್ಪಳ ಸಂಡಿಗೆ, ಬಸಳೆ, ಸೋರೆಕಾಯಿ, ಬೇವುಸೊಪ್ಪು, ಮರಗೆಣಸು, ಉಪ್ಪಿನಕಾಯಿ, ಹಾಗಲಕಾಯಿ, ಪೊಡಿ, ವಯರ್, ಬ್ಯಾಗ್ಗಳು, ಡ್ರ್ಯಾಗನ್ ಫ್ರೂಟ್ಸ್, ನ್ಯೂಟ್ರಿಬ್ಲೆಂಟ್ ಹೇರ್ ಆಯಿಲ್, ವಿವಿಧ ಬಗೆಯ ವಿಧದ ಚಿಪ್ಸ್ ವಿವಿಧ ತರಕಾರಿಗಳನ್ನು ಮಾರಾಟ ಮಾಡಿದ ಸ್ವಸಹಾಯ ಸಂಘದ ಸದಸ್ಯರು ಸುಮಾರು 15 ಸಾವಿರದಷ್ಟು ಆದಾಯವನ್ನು ಗಳಿಸಿದ್ದಾರೆ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶೀತ ಜಗತ್, ಬಿಆರ್ಪಿ, ಎಂಬಿಕೆ, ಕೃಷಿಸಖಿ, ಪಶುಸಖಿ ಭಾಗವಹಿಸಿದ್ದರು.













