






ಪುತ್ತೂರು:ಪಂಜಳ ಶಾಂತಿಗಿರಿ ವಿದ್ಯಾನಿಕೇತನ ಶಾಲೆಯ 2026- 27 ನೇ ಸಾಲಿನ ರಕ್ಷಕ -ಶಿಕ್ಷಕ ಸಮಿತಿಯ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ವಂ|ಬಿಜು ಕೆ.ಜಿ ಅವರು ಅಧ್ಯಕ್ಷತೆ ವಹಿಸಿದ್ದರು ಸಭೆಯಲ್ಲಿ ಕಳೆದ ಸಾಲಿನ ರಕ್ಷಕ ಶಿಕ್ಷಕ ಸಮಿತಿಯ ಪದಾಧಿಕಾರಿಗಳಿಗೆ ಅವರ ಅತ್ಯುತ್ತಮ ಸಹಕಾರಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಸ್ತುತ 2026-27 ನೇ ಸಾಲಿನ ಶಾಲಾ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಿ ಪದಾಧಿಕಾರಿಗಳನ್ನು ಗುರುತಿಸಲಾಯಿತು.



ನೂತನ ಶಾಲಾ ಸಮಿತಿಯ ಅಧ್ಯಕ್ಷರಾಗಿ ಶಾಲಾ ಮುಖ್ಯ ಗುರು ವಂ|ಡೇವಿಡ್ ಮಣಕ್ಕುನ್ನೆಲ್, ಉಪಾಧ್ಯಕ್ಷರಾಗಿ ಮಂಗಳ ವಿ , ಕಾರ್ಯದರ್ಶಿಯಾಗಿ ಪ್ರಸಾದ್ ರೈ ಕೊಡಂಕೇರಿ, ಖಜಾಂಜಿಯಾಗಿ ಬಾಲಾಯ ಅಬ್ದುಲ್ ಮಜೀದ್ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರಿಗೆ ಗರ್ಭಕಂಠದ ಕ್ಯಾನ್ಸರ್ ಮತ್ತು ಎಚ್ ಪಿ ವಿ ವ್ಯಾಕ್ಸಿನ್ ಬಗ್ಗೆ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಡಾ. ನಮಿತಾ ನಾಯ್ಕ್ ಅವರು ಮಾಹಿತಿ ನೀಡಿದರು. ಪವಿತ್ರ ಸ್ವಾಗತಿಸಿ, ಜೆಸಿಂತಾ ಮೊಂತೆರೋ ವಂದಿಸಿದರು. ಚಂಚಲ ಕಾರ್ಯಕ್ರಮ ನಿರೂಪಿಸಿದರು.













