






ಕೆಯ್ಯೂರು: ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ 5 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶೇಷ ಸಹಕಾರ ಸಪ್ತಾಹದ ಅಂಗವಾಗಿ ಕೆಯ್ಯೂರು ಹಾಲು ಉತ್ಪಾದಕರ ಸಂಘದಲ್ಲಿ ಜಾನುವಾರುಗಳ ಬಂಜೆತನ ನಿವಾರಣೆ ಮಾಹಿತಿ ಶಿಬಿರ ನಡೆಯಿತು.


ಕೆಯ್ಯೂರು ಹಾಲು ಉತ್ಪಾದಕರ ಸಂಘ ಮತ್ತು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಈ ಶಿಬಿರದಲ್ಲಿ ರೈತರಿಗೆ ಬಂಜೆತನದ ಕಾರಣ, ಲಕ್ಷಣ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.




ಶಿಬಿರದಲ್ಲಿ ಉಚಿತವಾಗಿ ರಾಸುಗಳಿಗೆ ಔಷಧಿ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕ ಜಯರಾಮ ರೈ ಬಳಜ್ಜ ಭಾಗವಹಿಸಿದ್ದರು. ಒಕ್ಕೂಟದ ಪುತ್ತೂರು ವಲಯದ ಉಪ ವ್ಯವಸ್ಥಾಪಕರಾದ ಡಾ. ಸತೀಶ್ ರಾವ್, ವಿಸ್ತರಣಾಧಿಕಾರಿ ವಿದ್ಯಾ ಸುನಿಲ್, ಸಂಘದ ಆಡಳಿತ ಅಧಿಕಾರಿ, ಸಂಘದ ಉಪಾಧ್ಯಕ್ಷ ಚಂದ್ರಹಾಸ್ ರೈ, ಆಡಳಿತ ಮಂಡಳಿ ಸದಸ್ಯರು, ಕಾರ್ಯದರ್ಶಿ, ಕೆ.ಆರ್.ಜಿ. ಕಾರ್ಯಕರ್ತರು ಉಪಸ್ಥಿತರಿದ್ದರು.










