ಈಶ್ವರಮಂಗಲ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ

0

ಈಶ್ವರಮಂಗಲ: ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಕೆಗಳ ತರಗತಿಗಳಿಗೆ ಜುಲೈ 4ರಂದು ಚಾಲನೆ ನೀಡಲಾಯಿತು.

ಸಂಗೀತ, ಚಿತ್ರಕಲೆ, ಯಕ್ಷಗಾನ ಮತ್ತು ಯಕ್ಷಗಾನ ಹಿಮ್ಮೇಳ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಗೀತ ತರಬೇತುದಾರರಾದ ಶ್ರೀ ಕೆ. ರಾಮಕೃಷ್ಣ, ಯಕ್ಷಗಾನ ತರಬೇತುದಾರ ಶಿವಾನಂದ ಶೆಟ್ಟಿ ಪೆರ್ಲ, ಯಕ್ಷಗಾನ ಹಿಮ್ಮೇಳ ತರಬೇತುದಾರ ರಾಘವ ಬಳ್ಳಾಲ್ ಕಾರಡ್ಕ, ಚಿತ್ರಕಲಾ ತರಬೇತುದಾರರಾದ ರಶ್ಮಿ ಶೆಟ್ಟಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಚಿನ್ಮಯ ಪನೆಯಾಲ ಉಪಸ್ಥಿತರಿದ್ದು ತರಗತಿಗಳನ್ನು ಶುಭಾರಂಭಿಸಿದರು.ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳು ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

LEAVE A REPLY

Please enter your comment!
Please enter your name here