







ಪುತ್ತೂರು: ಇಲ್ಲಿನ ತೆಂಕಿಲ ‘ಶ್ರೇಯ ನಿಲಯ’ದ ರುಕ್ಮಯ್ಯ ಗೌಡ (71ವ)ರವರು ಅಲ್ಪಕಾಲದ ಅಸೌಖ್ಯದಿಂದ ಜೂ.29ರಂದು ನಿಧನರಾದರು.


ಹಲವು ವರ್ಷಗಳ ಕಾಲ ವಿದೇಶದಲ್ಲಿ ಟೈಲರ್ಸ್ ವೃತ್ತಿ ನಡೆಸಿ ಊರಿಗೆ ಆಗಮಿಸಿದ ಬಳಿಕ ಪರಿಯಾಲಡ್ಕದಲ್ಲಿ ಟೈಲರಿಂಗ್ ಹಾಗೂ ಫ್ಯಾನ್ಸಿ ಅಂಗಡಿಯನ್ನು ನಡೆಸುತ್ತಿದ್ದರು. ಇವರು ಟೈಲರ್ಸ್ ಅಸೋಸಿಯೇಶನ್ ಪುಣಚ ವಲಯದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.



ಮೃತರು ಪತ್ನಿ ನಿವೃತ್ತ ಶಿಕ್ಷಕಿ ಕಮಲಬಿ, ಪುತ್ರಿಯರಾದ ಯಶಸ್ವಿ ಎಸ್.ಆರ್.ಶ್ರೇಯಸ್ವಿಎಸ್ ಆರ್. ಅಳಿಯಂದಿರಾದ ಸನಲ್ ಕುಮಾರ್, ಅನೂಪ್ ಕೆ.ಜೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.










