






ಪುತ್ತೂರು: ಇರ್ದೆ ಗ್ರಾಮದ ಮಣ್ಣಾಪು ನಿವಾಸಿ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.6ರಂದು ನಡೆದಿದೆ.


ಮೃತರನ್ನು ತಿಲಕ್ (18) ಎಂದು ಗುರುತಿಸಲಾಗಿದೆ.ಮಧ್ಯಾಹ್ನದ ವೇಳೆ ತಮ್ಮ ಮನೆಯ ಕೋಣೆಯಲ್ಲಿ ತಿಲಕ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.



ಮೃತರು ತಂದೆ ಗಂಗಾಧರ ಮಡಿವಾಳ, ತಾಯಿ ಮಮತಾ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಘಟನೆ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.










