






ಕಾಣಿಯೂರು: ಕುದ್ಮಾರು ಸ.ಉ.ಹಿ.ಪ್ರಾ ಶಾಲೆ ಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಆರಂಭಗೊಂಡ ಎಲ್.ಕೆ.ಜಿ., ಯು.ಕೆ.ಜಿ ತರಗತಿಯ ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಆಲೋಚನೆಯನ್ನು ಬಿತ್ತುವ ಸಲುವಾಗಿ ಪ್ರತೀ ತಿಂಗಳು ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದರಂತೆ ಪುಟಾಣಿಗಳಲ್ಲಿ ಬಣ್ಣಗಳ ಪರಿಕಲ್ಪನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಳದಿ ಬಣ್ಣದ ಪರಿಚಯಕ್ಕಾಗಿ ‘ಯೆಲ್ಲೋ ಡೇ’ ಆಚರಿಸಲಾಯಿತು .ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಚಂದ್ರ ಅನ್ಯಾಡಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು . ಶಾಲಾ ಮುಖ್ಯ ಗುರು ಮಿನಿ ವರ್ಗಿಸ್ ಮಾತನಾಡಿ, ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಲು ಪೂರಕವಾಗಿದೆ ಎಂದರು.


ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ದೇವರಾಜ್ ನೂಜಿ ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.













