ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ 25 ಲಕ್ಷ ರೂ ಅನುದಾನ: ಶಾಸಕ ಅಶೋಕ್ ರೈ

0

ಪುತ್ತೂರು; ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಅಭಿವೃದ್ದಿಗೆ 25 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಪ್ರಾಧಿಕಾರದಿಂದ ಮಂಜೂರುಗೊಂಡ 25 ಲಕ್ಷ ಅನುದಾನವನ್ನು ಮೂರು ರಸ್ತೆಗಳಿಗೆ ಮೀಸಲಿಡಲಾಗಿದೆ. ಬಲ್ನಾಡು ಗ್ರಾಪಂ ವ್ಯಾಪ್ತಿಯ ಅಜಕ್ಕಳ ಇರ್ದೆ ಸಂಪರ್ಕ ರಸ್ತೆ ಅಭಿವೃದ್ದಿಗೆ 13.95 ಲಕ್ಷ, ಕೊಳ್ತಿಗೆ ಗ್ರಾಮದ ಬೇರಿಕೆ ನೆಲ್ಲಿಕುಮೇರು ಕಾಪುತ್ತಕಾಡು ರಸ್ತೆ ಅಭಿವೃದ್ದಿಗೆ 5.8 ಲಕ್ಷ ಹಾಗೂ ಬಲ್ನಾಡು ಗ್ರಾಮದ ಇರ್ದೆ -ಅಜಕ್ಕಳ ರಸ್ತೆ ಅಭಿವೃದ್ದಿಗೆ 5.97 ಲಕ್ಷ ಅನುದಾನವನ್ನು ಮೀಸಲಿಡಲಾಗಿದೆ, ಶಾಸಕ ಅಶೋಕ್ ರೈ ಶಿಫಾರಸ್ಸಿನ ಮೇರೆಗೆ ಈ ಅನುದಾನ ಮಂಜೂರಗೊಂಡಿದೆ.

LEAVE A REPLY

Please enter your comment!
Please enter your name here