ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ ಆಟಿ ತಿಂಗಳ ಬಿಗ್‌ಸೇಲ್ : ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ- ಜಾತ್ರೆಯಂತಾದ ಮಳಿಗೆ

0

ಅತೀ ಕಡಿಮೆ ದರದಲ್ಲಿ ಮಾರಾಟ
ಪ್ರತಿದಿನ ಹೊಚ್ಚ ಹೊಸ ಸಂಗ್ರಹ
ಮಹಿಳೆಯರಿಗೆ, ಫುರುಷರಿಗೆ, ಮಕ್ಕಳಿಗೆ ಪ್ರತ್ಯೇಕ ಖರೀದಿ ವಿಭಾಗ

ಪುತ್ತೂರು: ಜವುಳಿ ಖರೀದಿ ಎಂದಾಕ್ಷಣ ಪುತ್ತೂರಿನ ಜನತೆಗೆ ನೆನಪಾಗುವ, ಇಲ್ಲಿನ ಮುಖ್ಯರಸ್ತೆಯಲ್ಲಿರುವ ಯಂ. ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ, ಪುತ್ತೂರಿನವರೊಂದಿಗೆ ಹತ್ತೂರಿನವರೂ ಕಾತರದೊಂದಿಗೆ ಕಾಯುತ್ತಿರುವ, ಪ್ರಖ್ಯಾತ ಮಿಲ್‌ಗಳಿಂದ ನೇರವಾಗಿ ಖರೀದಿಸಿ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡುವ ಕಂಪೆನಿ ಸೀರೆಗಳು ಮತ್ತು ಇನ್ನಿತರ ಜವುಳಿಗಳ ಆಟಿ ಸೇಲ್ ಜು.6ರಂದು ಆರಂಭಗೊಂಡಿದ್ದು ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಸಂಜೀವ ಶೆಟ್ಟಿ ಜವಳಿ ಮಳಿಗೆಯಲ್ಲಿ ಆಷಾಡ ಮಾಸದಲ್ಲಿ ವರ್ಷಕ್ಕೆ ಒಂದು ಭಾರಿ ಆಟಿದ ಸೇಲ್ ಆಯೋಜಿಲಸಾಗುತ್ತಿದೆ. ಅದರಂತೆ ಈ ಬಾರಿಯೂ ಆಟಿ ತಿಂಗಳ ಸೇಲ್ ಜುಲೈ 6ರಿಂದ ಆರಂಭಿಸಲಾಗಿತ್ತು. ಅತೀ ದೊಡ್ಡಮಟ್ಟದಲ್ಲಿ ಗ್ರಾಹಕರಿಗೋಸ್ಕರ ಸಾರಿ, ಪ್ಯಾಂಟ್, ಶರ್ಟ್, ಚೂಡಿದಾರ್ ಮತ್ತು ಇನ್ನಿತರ ಜವುಳಿಗಳನ್ನು ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಗ್ರಾಹಕರು ಉತ್ತಮ ಪ್ರತಿಕ್ರಿಯೆ ನೀಡಿದ್ದು ಮಳಿಗೆ ತುಂಬಾ ಗ್ರಾಹಕರು ತಮಗೆ ಇಷ್ಟವಾದ ಬಟ್ಟೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅತೀ ಕಡಿಮೆ ದರದಲ್ಲಿ ಮಕ್ಕಳ, ಮಹಿಳೆಯರ, ಪುರುಷರ ವಿವಿಧ ವಿನ್ಯಾಸದ ಬಟ್ಟೆಗಳು ಲಭ್ಯವಿದೆ. ಗ್ರಾಹಕರಿಂದ ತುಂಬಿ ತುಳುಕುತ್ತಿರುವ ಮಳಿಗೆಯಲ್ಲಿ ಜಾತ್ರೆಯ ರೀತಿ ಕಂಡುಬರುತ್ತಿದೆ.

ಮಳಿಗೆ ಅತ್ಯಂತ ವಿಶಾಲವಾದ ಸ್ಥಳಾವಕಾಶ ಹೊಂದಿದ್ದು ಗ್ರಾಹಕರಿಗೆ ವಿಪುಲ ಹಾಗೂ ಆರಾಮದಾಯಕ ಆಯ್ಕೆಗೆ ಅನುಕೂಲವಾಗಿದೆ. ಈ ಆಷಾಢ ಮಾಸದಲ್ಲಿ ಏರ್ಪಡಿಸುವ ಅತೀ ದೊಡ್ಡ ಮಾರಾಟಕ್ಕೆ ಪುತ್ತೂರು ಅಲ್ಲದೇ ದೂರದ ಊರುಗಳಿಂದ ಕೂಡ ಗ್ರಾಹಕರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂದು ಮಳಿಗೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here