






ಆಲಂಕಾರು: ಜೇಸಿಐ ಬೈಂದೂರು ಸಿಟಿ ಘಟಕದ ಆತಿಥ್ಯದಲ್ಲಿ ನಡೆದ ಜೇಸಿಐ ಭಾರತದ ವಲಯ 15ರ ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿ ಸಮ್ಮೇಳನದಲ್ಲಿ ಜೇಸಿಐ ಆಲಂಕಾರು ಘಟಕಕ್ಕೆ ಹಲವಾರು ಪ್ರಶಸ್ತಿಗಳು ಹಾಗೂ ಮನ್ನಣೆಗಳು ಲಭಿಸಿದೆ.


ಈ ತನಕ ಘಟಕದಲ್ಲಿ ನಡೆಸಲಾದ ಕಾರ್ಯಕ್ರಮಗಳಿಗಾಗಿ ಕೊಡಲ್ಪಡುವ ವಲಯದ ಅತ್ಯುತ್ತಮ 10 ಮಹಿಳಾ ಜೇಸಿ ವಿಂಗ್ ಪ್ರಶಸ್ತಿ ವಿಭಾಗದಲ್ಲಿ ಆಲಂಕಾರು ಘಟಕವು ಮೂರನೇ ಸ್ಥಾನ, ಅತ್ಯುತ್ತಮ ಜೆಜೇಸಿ ವಿಂಗ್ ರನ್ನರ್ ಅಪ್ ಪ್ರಶಸ್ತಿ, ಸ್ಥಳದಲ್ಲೇ ನಡೆದ ಜೂನಿಯರ್ ಜೇಸಿ ವಿಭಾಗದ ಪರಿಣಾಮಕಾರಿ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಹಾಗೂ ಘಟಕದಲ್ಲಿ ಮಹಿಳಾ ಜೇಸಿ ಹಾಗೂ ಜೆಜೇಸಿ ವಿಂಗ್ ವತಿಯಿಂದ ನಡೆಸಲಾದ ಕಾರ್ಯಕ್ರಮಗಳಿಗೆ ಹಲವಾರು ಮನ್ನಣೆಗಳು ದೊರೆತಿದೆ.



ಜೆಸಿಐ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಮಹೇಶ್ ಪಾಟಾಳಿ, ಮಹಿಳಾ ಜೇಸಿ ಅಧ್ಯಕ್ಷೆ ಕೃತಿಕಾ ಟಿ.ರೈ, ಜೂನಿಯರ್ ಜೇಸಿ ಅಧ್ಯಕ್ಷೆ ಜೆಜೇಸಿ ಕೀರ್ತಿ ಶೆಟ್ಟಿ, ಸದಸ್ಯ ವಲಯಾಧಿಕಾರಿ ವಿನೀತ್ ಶಗ್ರಿತ್ತಾಯ,ಪೂರ್ವಾಧ್ಯಕ್ಷೆ ಮಮತಾ ಅಂಬರಾಜೆ, ಸದಸ್ಯರಾದ ವಸಂತಿ ಕನೆಮಾರು, ಶ್ರುತಿ ಪ್ರಸಾದ್ ರೈ ಪ್ರಶಸ್ತಿ ಸ್ವೀಕರಿಸಿದರು.










