ಉಪ್ಪಿನಂಗಡಿ: ಏರಿಕೆಯಾದ ನದಿ ನೀರಿನ ಮಟ್ಟ

0

ಉಪ್ಪಿನಂಗಡಿ: ನದಿ ಪಾತ್ರದ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈ ಬಾರಿಯ ಮಳೆಗಾಲದಲ್ಲಿ ಮೊದಲ ಬಾರಿಗೆ ಜು.7ರಂದು ನೇತ್ರಾವತಿ ಹಾಗೂ ಕುಮಾರಧಾರ ನದಿಯಲ್ಲಿ ಹೆಚ್ಚಿನ ನೀರು ಕಾಣಿಸಿಕೊಂಡಿದೆ.


ಬೆಳಗ್ಗೆ 25.01 ಮೀ. ಇದ್ದ ನೇತ್ರಾವತಿ ನದಿ ನೀರಿನ ಮಟ್ಟ ರಾತ್ರಿ 9ರ ಸುಮಾರಿಗೆ ಸಮುದ್ರಮಟ್ಟಕ್ಕಿಂತ 26.05 ಮೀ. ಎತ್ತರಕ್ಕೇರಿದೆ. ಇಲ್ಲಿ ಅಪಾಯದ ಮಟ್ಟ 30.01 ಮೀ. ಆಗಿದೆ. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗೆ ಇಳಿಯಲು ಇರುವ 36 ಮೆಟ್ಟಿಲುಗಳಲ್ಲಿ 19 ಮೆಟ್ಟಿಲುಗಳು ಮುಳುಗಿದ್ದು, 17 ಮೆಟ್ಟಿಲುಗಳು ಕಾಣಿಸುತ್ತಿತ್ತು. ಸ್ಥಳದಲ್ಲಿ ಉಪತಹಶೀಲ್ದಾರ್ ಕವಿತಾ ಅವರ ನೇತೃತ್ವದ ಗೃಹರಕ್ಷಕರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ಸ್ಥಳದಲ್ಲಿದ್ದು, ತುರ್ತು ಕಾರ್ಯಾಚರಣೆಗೆ ಸನ್ನದ್ಧವಾಗಿದೆ. ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಉಭಯ ನದಿಯಲ್ಲಿ ಒಳಹರಿವು ಕಡಿಮೆಯಾಗಿತ್ತು. ಜುಲೈ ಆರಂಭದವರೆಗೂ ನೀರಿಲ್ಲದೆ ನದಿಯ ಒಡಲು ಗೋಚರಿಸುತ್ತಿತ್ತು.

LEAVE A REPLY

Please enter your comment!
Please enter your name here