







ನಿಡ್ಪಳ್ಳಿ; ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಏಕತಡ್ಕ ಅಜ್ಜಿಕಲ್ಲು ಇಲ್ಲಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಸುಜಾತ ಶೆಟ್ಟಿ ಅವರು ಶಾಲಾ ಬ್ಯಾಗ್‌ಗಳನ್ನು ಕೊಡುಗೆಯಾಗಿ ನೀಡಿದರು.


ಅಲ್ಲದೇ ಸಂತೋಷ್ ಕುಮಾರ್ ರೈ ಅಡ್ಯೆತ್ತಿಮಾರ್, ಸುಜಿತ್ ರೈ ನಾಯಿಲ, ವಿನೋದ್ ಕುಮಾರ್ ರೈ ಮೊಡಪ್ಪಾಡಿ, ಮಹೇಶ್ ರೈ ಕೇರಿ, ಮೋಹನ ನಾಯ್ಕ, ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‌ಗಳನ್ನು ವಿತರಿಸಲಾಯಿತು.




ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರು ತನುಜಾ ಎಂ. ಕೆ , ಕುಂಬ್ರ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ದೇವಪ್ಪ, ಎಸ್ ಡಿಎಂಸಿ ಅಧ್ಯಕ್ಷ ಮೋಹನ್ ನಾಯ್ಕ ಮುಂಡೋವೂಮೂಲೆ, ಉಪಾಧ್ಯಕ್ಷೆ ಜ್ಯೋತಿ ಕಳೆಂಜಿಲ, ಸದಸ್ಯರಾದ ಮಹೇಶ್ ರೈ ಕೇರಿ, ಉಷಾ ಅಜ್ಜಿಕಲ್ಲು, ಮೋಹನ್ ಚಂದ್ರ ಮುಂಡೋವುಮೂಲೆ, ಸಹಶಿಕ್ಷಕರಾದ ಪ್ರೀತಂ ಎನ್, ವಿದ್ಯಾ ಪ್ರತಿಮಾ ಪಾಯಸ್, ಅತಿಥಿ ಶಿಕ್ಷಕಿಯರಾದ ಚೇತನಾ ಸತೀಶ್, ಚಂದ್ರಕಲಾ, ಜ್ಯೋತಿ, ಲಕ್ಷ್ಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










