ನಿಡ್ಪಳ್ಳಿ: ರಸ್ತೆಯ ಮೇಲೆ ಬಾಗಿರುವ ಮರ – ಅಪಾಯದ ಎಚ್ಚರಿಕೆ

0

ನಿಡ್ಪಳ್ಳಿ: ರೆಂಜದಿಂದ ಬಡಗನ್ನೂರು ಹೋಗುವ ಮುಖ್ಯ ರಸ್ತೆಯ ನಿಡ್ಪಳ್ಳಿ ವಿಜಯನಗರ ಸಮೀಪ ಒಂದು ಮರ ರಸ್ತೆಯ ಮೇಲೆ ಬಾಗಿ ನಿಂತಿದ್ದು, ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ರಸ್ತೆಯನ್ನು ಬಹುತೇಕ ಮುಚ್ಚಿದ ಸ್ಥಿತಿಯಲ್ಲಿರುವ ಈ ಮರದ ಕೆಳಗಡೆಯಿಂದಲೇ ವಿದ್ಯುತ್ ಎಚ್.ಟಿ ಲೈನ್ ಕೂಡ ಹಾದು ಹೋಗುತ್ತಿದೆ. ಈ ಬಾರಿಯ ಮಳೆಗಾಲದಲ್ಲಿ ಮಳೆಗಿಂತ ಗಾಳಿಯ ಅಬ್ಬರವೇ ಜಾಸ್ತಿಯಾಗಿದ್ದು, ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ತುಂಡಾಗಿರುವ ಘಟನೆಗಳು ವರದಿಯಾಗಿವೆ. ಈ ಮರವನ್ನು ತಕ್ಷಣ ತೆರವುಗೊಳಿಸದಿದ್ದರೆ ಅಕಸ್ಮಾತ್ತಾಗಿ ಮರ ಬಿದ್ದರೆ ಸಂಚರಿಸುವ ಸಾರ್ವಜನಿಕರಿಗೂ ತೊಂದರೆ, ವಿದ್ಯುತ್ ಲೈನ್ ಮೇಲೆ ಬಿದ್ದರೆ ಮೆಸ್ಕಾಂಗೂ ನಷ್ಟ ಉಂಟಾಗುವುದರಲ್ಲಿ ಅನುಮಾನವಿಲ್ಲ.

LEAVE A REPLY

Please enter your comment!
Please enter your name here