ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿಜ್ಞಾನ ಯೋಜನಾ ಪರಿಚಯ ಕಾರ್ಯಕ್ರಮ

0

ಪುತ್ತೂರು : ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆ ಹಾಗೂ ನವೋದ್ಯಮದ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ, ಶಾಲೆಯ ಎ.ವಿ. ಸಭಾಂಗಣದಲ್ಲಿ ಜುಲೈ 7 ರಂದು ವಿಜ್ಞಾನ ಯೋಜನಾ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಅಜಿತ್ ಹೆಬ್ಬಾರ್; ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು, ಕುತೂಹಲವನ್ನು ವೃದ್ಧಿಸಿ, ಸಂಶೋಧನೆ ಹಾಗೂ ನವೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಬೇಕಾದ ಮಾರ್ಗದರ್ಶನ ನೀಡಿ ಪ್ರೇರಣಾ ನುಡಿಗಳನ್ನಾಡಿದರು.

ಕಾರ್ಯಕ್ರಮವು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆ., ಪ್ರಾಂಶುಪಾಲೆ ಸಿಂಧು ವಿ. ಜಿ., ಉಪಪ್ರಾಂಶುಪಾಲೆ ಶ್ರೀದೇವಿ ಕೆ. ಹೆಗ್ಡೆ ಇವರ ಉಪಸ್ಥಿತಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಐ ಒ ಟಿ ಲ್ಯಾಬ್ ಇನ್‌ಸ್ಟ್ರಕ್ಟರ್ ವೆಂಕಟೇಶ್ ಹಾಗೂ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ನ ಸ್ವಯಂಸೇವಕರಾದ ಆದಿತ್ಯ ಮತ್ತು ಕೃಷ್ಣ ಪ್ರಸಾದ್ ಅವರನ್ನು, FGC Nationals -BYKM -2026 ರಾಷ್ಟ್ರೀಯ ಸಮಾವೇಶದಲ್ಲಿ ವಿದ್ಯಾರ್ಥಿಗಳು ಕಲ್ಪನಾ ಚಾವ್ಲಾ ಶೌರ್ಯ ಸಾಧನೆ ಪ್ರಶಸ್ತಿ ಪಡೆಯಲು ನೀಡಿದ ಅಮೂಲ್ಯ ಮಾರ್ಗದರ್ಶನ ಮತ್ತು ಸಹಕಾರಕ್ಕಾಗಿ ಸನ್ಮಾನಿಸಲಾಯಿತು.

ಅದೇ ರೀತಿ, ಆ ಪ್ರಶಸ್ತಿ ಪಡೆದ ಪುತ್ತೂರು ಟೆಕ್ನೋವೇಟರ್ಸ್ ತಂಡದ ಸದಸ್ಯರಾದ ಮೇಧಾ ಭಟ್, ಪ್ರಣಮ್ಯ ಜೆ., ಮಾನ್ವಿ ಕಜೆ, ಆರಾಧನಾ ಬಿ. ಹಾಗೂ ಸುದೀಕ್ಷಾ ಎಸ್. ಭಟ್ ಮತ್ತು ಅವರ ಮಾರ್ಗದರ್ಶಕಿ ಶಿಕ್ಷಕಿ ಶ್ರೀಮತಿ ಹೇಮಾ ಭಟ್ ಅವರನ್ನು, ಶಾಲೆಗೆ ಕೀರ್ತಿ ತಂದ ಸಾಧನೆಗಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.

ಹತ್ತನೇ ತರಗತಿ ವಿದ್ಯಾರ್ಥಿಗಳಾದ ಹರ್ಷ ಸ್ವಾಗತ ಭಾಷಣ, ಹರ್ಷವರ್ಧನ್ ಮುಖ್ಯ ಅತಿಥಿಗಳ ಪರಿಚಯ, ಅದ್ವೈತ್ ವಂದನಾರ್ಪಣೆ ಹಾಗೂ ಅಭಿನವ್ ಮತ್ತು ತುಷಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here