







ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸವಣೂರು ವಲಯದ ಸದಸ್ಯರಿಗೆ ಸಂಬಂಧಿಸಿ ಡಿಜಿಟಲ್ ಪೇ ಸೇವೆಗೆ ಜು 8
ರಂದು ಬರೆಪ್ಪಾಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ 2ರ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಎ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಡಿಜಿಟಲ್ ಸೇವೆಯನ್ನು ಎಲ್ಲಾ ಸದಸ್ಯರು ಸದುಪಯೋಗ ಮಾಡಿಕೊಳ್ಳಬೇಕು. ಬ್ಯಾಂಕ್ ಖಾತೆಯಿಂದ ಸುಲಭವಾಗಿ ಹಣ ಪಡೆಯುವ ವ್ಯವಸ್ಥೆಯನ್ನು ಒಕ್ಕೂಟದ ಸದಸ್ಯರು ಪ್ರಯೋಜನವನ್ನು ಪಡಕೊಳ್ಳುವುದರ ಜೊತೆಗೆ ಇತರರಿಗೂ ಮಾಹಿತಿಯನ್ನು ನೀಡಬೇಕು ಎಂದರು.



ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಹೇಶ್ ಕೆ ಸವಣೂರು ಮಾತನಾಡಿ ಡಿಜಿಟಲ್ ಪೇ ಒಂದು ಉತ್ತಮವಾದಂತಹ ಕಾರ್ಯಕ್ರಮ ಇದರ ಸದುಪಯೋಗವನ್ನು ಎಲ್ಲರೂ ಪಡಕೊಂಡಾಗ ಗ್ರಾಮದ ಅಭಿವೃದ್ಧಿಗೂ ಪೂರಕ ಎಂದರು.




ಸಮರ್ಥ ಜನಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಗಿರಿಶಂಕರ ಸುಲಾಯ ಮಾತನಾಡಿ ಡಿಜಿಟಲ್ ಪೇ ಗ್ರಾಮೀಣ ಭಾಗದ ಜನರಿಗೆ ತುಂಬಾ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರು ಪ್ರಯೋಜನವನ್ನು ಪಡಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ, ಅಮಿತಾ, ತಾರಾ, ಹಂಪಶ್ರೀ, ಒಕ್ಕೂಟದ ಪದಾಧಿಕಾರಿಗಳು, ಯೋಜನೆಯ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ಸವಣೂರು ವಲಯದ ಮೇಲ್ವಿಚಾಕರಾದ ಹೇಮಲತಾ ಸ್ವಾಗತಿಸಿ, ವಂದಿಸಿದರು.










