







ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಕೆಮ್ಮಿಂಜೆ ವಲಯದ ಮುಕ್ವೆ ಸೇವಾ ಕೇಂದ್ರದಲ್ಲಿ ಡಿಜಿ ಪೇ ಉದ್ಘಾಟನೆಯನ್ನು ಪರಮಾರ್ಗ ಒಕ್ಕೂಟದ ಅಧ್ಯಕ್ಷ ಬಿಳಿಯಪ್ಪ ಗೌಡ ನೆರವೇರಿಸಿದರು. ತಾಲೂಕು ನೋಡಲ್ ಅಧಿಕಾರಿ ಜೀವನ್ ಮಾತನಾಡಿ ವಾರದ ಹಣ ಸಂಗ್ರಹದಂದು ಆಧಾರ್ ಕಾರ್ಡ್ ಬಳಸಿ ಸುಲಭವಾಗಿ ಹಣ ಪಡೆಯುವ ವ್ಯವಸ್ಥೆ ಇದಾಗಿದೆ ಎಂದರು. ವಲಯ ಅಧ್ಯಕ್ಷ ಸುಂದರ ಬಲ್ಯಾಯ, ಕಟ್ಟಡ ಮಾಲೀಕ ಅಬ್ದುಲ್ ಹಾಜಿ, ಒಕ್ಕೂಟದ ಅಧ್ಯಕ್ಷ ಸುಧಾಕರ್ ಕುಲಾಲ್, ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶೋಕ್ ಕುಮಾರ್ ಸೊರಕೆ, ಸೇವಾ ಪ್ರತಿನಿಧಿಗಳು, ಹಣ ಸಂಗ್ರಹಗಾರರು, ಸುವಿದ ಸಹಾಯಕರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಗಿರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಯಶೋಧ ವಂದಿಸಿದರು.
















