ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಾರಂಭೋತ್ಸವ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಆರಂಭೋತ್ಸವವನ್ನು ಪ್ರತಿವರ್ಷದಂತೆ ಗಣಪತಿ ಹೋಮ ಹಾಗೂ ಸರಸ್ವತಿ ಪೂಜೆಯೊಂದಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರಿನವರಾದ ಮೂಕಾಂಬಿಕ ಶಿಲ್ಪಕಲಾ ಕೇಂದ್ರ ಕಾರ್ಕಳ ಅದರ ಮಾಲಕರಾದ ಕೋಟಿಮೂಲೆ ಗುಣವಂತೇಶ್ವರ ಭಟ್ ಹಾಗೂ ಅವರ ಸುಪುತ್ರ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿ ವಿಜಯ ಶಂಕರ ಇವರು ಕೊಡುಗೆಯಾಗಿ ನೀಡಿದ ಸರಸ್ವತಿ ವಿಗ್ರಹವನ್ನು ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಯಿತು.


ಭಾರತ ಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಿಸಿದ ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಾಕೆಎಂ ಕೃಷ್ಣಭಟ್ ಕಾರ್ಯದರ್ಶಿಗಳು ವಿವೇಕಾನಂದ ವಿದ್ಯಾವರ್ಧಕ ಸಂಘ ಮಾತನಾಡುತ್ತಾ ವಿದ್ಯಾರ್ಥಿಗಳು ಗುರಿ,ಆತ್ಮವಿಶ್ವಾಸ, ಸಕಾರಾತ್ಮಕ ಮನೋಭಾವ,ಸಮಯಪಾಲನೆ ಹಾಗೂ ಶಿಸ್ತಿನೊಂದಿಗೆ ಅಧ್ಯಯನ ನಡೆಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ತಾಂತ್ರಿಕ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನ, ನೈತಿಕ ಆರ್ಥಿಕ ಮೌಲ್ಯಗಳು ಮತ್ತು ಉದ್ಯೋಗ ಕೌಶಲ್ಯಗಳನ್ನು ಉಳಿಸಿಕೊಂಡಾಗ ನಿಮಗೆ ಇತಿಹಾಸ ನಿರ್ಮಾಣ ಮಾಡುವದೊಡ್ಡ ಅವಕಾಶ ಇದೆಎಂದು ಶುಭ ಹಾರೈಸಿದರು.


ಆಡಳಿತ ಮಂಡಳಿಯ ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲ ಮಾತನಾಡುತ್ತಾ”ಹೊಸದಾಗಿ ಸೇರ್ಪಡೆಗೊಂಡ ನೀವು ಕಾಲೇಜಿನಲ್ಲಿ ಪ್ರಾರಂಭಿಸಿದ ಹೊಸ ಕೋರ್ಸ್‌ಗಳಿಂದ ಪ್ರಯೋಜನ ಪಡೆದು ಹೊಸ ಆವಿಷ್ಕಾರವನ್ನು ಮಾಡುವಂತಾಗಲಿ” ಎಂದು ಹಾರೈಸಿದರು.


ಕಾರ್ಯಕ್ರಮದ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ “ವಿದ್ಯಾರ್ಥಿಗಳು ಕಾಲೇಜುಜೀವನದಲ್ಲಿಉತ್ತಮ ಮನೋಭಾವ,ಶಿಸ್ತು,ಆತ್ಮವಿಶ್ವಾಸ ಹಾಗೂ ಗುರಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬವಿದ್ಯಾರ್ಥಿಯುತನ್ನದೃಷ್ಟಿಕೋನವನ್ನು ಸಕಾರಾತ್ಮಕವಾಗಿ ರೂಪಿಸಿಕೊಂಡು ಜೀವನದಲ್ಲಿಯಶಸ್ಸು ಸಾಧಿಸಬೇಕು. ಮುಂದಿನ ಮೂರು ವರ್ಷಗಳನ್ನು ಸದುಪಯೋಗಪಡಿಸಿಕೊಂಡು ಜ್ಙಾನ,ಕೌಶಲ್ಯ ಮತ್ತುಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.


ಈ ಸಂದರ್ಭದಲ್ಲಿಕಾಲೇಜಿಗೆ ಸರಸ್ವತಿ ವಿಗ್ರಹವನ್ನುದೇಣಿಗೆ ನೀಡಿದ ಮೂಕಾಂಬಿಕಾ ಶಿಲ್ಪಕಲಾ ಕೇಂದ್ರ ಕಾರ್ಕಳ ಇದರ ಮಾಲಕರಾದ ಶ್ರೀ ಗುಣವಂತೇಶ್ವರಅವರ ಮಗನಾದ ವಿಜಯ ಶಂಕರ ಕಾಲೇಜಿನ ಹಿರಿಯ ವಿದ್ಯಾರ್ಥಿ, ಅವರನ್ನು ಸನ್ಮಾನಿಸಲಾಯಿತು.


ಪ್ರಾಸ್ತಾವಿಕ ಭಾಷಣವನ್ನು ಮಾಡಿದಕಾಲೇಜಿನ ಪ್ರಾಂಶುಪಾಲರಾದ ಮುರಳೀಧರ್ ಯಸ್ ಮಾತನಾಡುತ್ತಾ ಸಂಸ್ಥೆಯ ಬಗ್ಗೆ ತಿಳಿಸಿಕೊಟ್ಟರು ಹಾಗೂ ಬಂದ ಅತಿಥಿಗಳನ್ನು ಸ್ವಾಗತಿಸಿದರು.
ಈ ಕಾರ‍್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳಾದ ರವಿ ಮುಂಗ್ಲಿಮನೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರವಿರಾಮ ಎಸ್. ಉಪಸ್ಥಿತರಿದ್ದರು.
ಧನ್ಯವಾದ ಸಮರ್ಪಣೆಯನ್ನು ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾದ ಪುಷ್ಪಾ ಬಿಎನ್‌ ಇವರು ನಡೆಸಿಕೊಟ್ಟರು.


ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ಹಿರಿಯ ಉಪನ್ಯಾಸಕಿ ಜಯಲಕ್ಷ್ಮಿ ಎಸ್ ಪ್ರಾರ್ಥಿಸಿದರು. ಸಂಪೂರ್ಣ ಕಾರ‍್ಯಕ್ರಮದ ನಿರೂಪಣೆಯನ್ನು ವಿಜ್ಙಾನ ವಿಭಾಗದ ಉಪನ್ಯಾಸಕಿಯಾದ ಸಹನಾ ಬಿ ಎಸ್ ಹಾಗೂ ಆಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ಗುರುರಾಜ್ ನೆರವೇರಿಸಿದರು.

LEAVE A REPLY

Please enter your comment!
Please enter your name here