ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಕ್ಷೀರಾಭಿಷೇಕ

0

ಪುತ್ತೂರು: ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಶ್ರೀ ಕೋದಂಡರಾಮ ಮತ್ತು ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಗೆ ಕ್ಷೀರಾಭಿಷೇಕ ಜು.12ರಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.

ಬೆಂಗಳೂರಿನ ಉದ್ಯಮಿಗಳಾದ ಬಾಲಕೃಷ್ಣ ರವರ ಸೇವಾರ್ಥವಾಗಿ ಸಾವಿರ ಲೀಟರ್ ಕ್ಷೀರಾಭಿಷೇಕ ನಡೆಯಿತು.

ಬೆಳಿಗ್ಗೆ ಸುಪ್ರಭಾತ (ಸದಾನಂದ ಶಾಸ್ತ್ರಿಗಳವರಿಂದ), ಬೆಳಿಗ್ಗೆ 9 ಗಂಟೆಯಿಂದ ಶ್ರೀ ಕೋದಂಡರಾಮ ಸ್ವಾಮಿಗೆ 1000 ಲೀಟರ್ ಕ್ಷೀರಾಭಿಷೇಕ ಹಾಗೂ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಗೆ 1000 ಲೀಟರ್ ಕ್ಷೀರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, 300 ಭಜಕರಿಂದ ಸಾಮೂಹಿಕ ಭಜನೆ, ಪಂಚಾಮೃತ ಅಭಿಷೇಕ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಧರ್ಮದರ್ಶಿ ಶಿವರಾಮ್ ಪಿ, ಶಿವರಾಮ್ ಶರ್ಮ ಹಾಗೂ ಭಕ್ತಾಧಿಗಳ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here