ಪಡ್ಡಾಯೂರು ಪಡ್ನೂರು ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ : ವಿದ್ಯಾರ್ಥಿ ಸಂಸತ್ತಿನ ಪ್ರಮಾಣ ವಚನ ಸಮಾರಂಭ

0


ಪುತ್ತೂರಿನ: ಡಾ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಚುನಾಯಿತ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿವೃತ್ತ ನಿರ್ದೇಶಕ ವಾಲ್ಟರ್ ಡಿಮೆಲ್ಲೊ ದೀಪೋಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವದ ಗುಣಗಳು ಹಾಗೂ ಜವಾಬ್ದಾರಿಯುತ ಆಡಳಿತದ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ವಿವಿಧ ಸಂಘಗಳ ಪುಸ್ತಕವನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ಚುನಾವಣೆಯಲ್ಲಿ ಶಾಲಾ ನಾಯಕಿಯಾಗಿ ಅಪೂರ್ವ (10ನೇ ತರಗತಿ), ಉಪನಾಯಕನಾಗಿ ಸ್ಕಂದ (9ನೇತರಗತಿ), ಶಿಕ್ಷಣ ಸಚಿವರಾಗಿ ಯಶ್ವಿತ್ ಪಿ ಯಸ್ ಮತ್ತು ಖುಷಿ ಎ ಆರ್ (9ನೇ ತರಗತಿ), ಶಿಸ್ತು ಸಚಿವರಾಗಿ ಚಿರಾಗ್ ಕೆ ಸಿ ಮತ್ತು ತೇಜಶ್ವಿನಿ (9ನೇ ತರಗತಿ), ಸಾಂಸ್ಕೃತಿ ಸಚಿವರಾಗಿ ವಿಕ್ರಮ್ ಬಿ ಮತ್ತು ಸಮೀಕ್ಷಾ (9ನೇ ತರಗತಿ), ಸ್ವಚ್ಚತಾ ಸಚಿವರಾಗಿ ಭವಿಕ್ ಮತ್ತು ಪಲ್ಲವಿ ಕೆ ಜಿ (9ನೇ ತರಗತಿ), ಇಂಧನ ಸಚಿವರಾಗಿ ಕಿಶನ್ ಮತ್ತು ಹರ್ಷಿಣಿ (9ನೇ ತರಗತಿ), ಆಹಾರ ಸಚಿವರಾಗಿ ಪ್ರೇಕ್ಷಣ್ ಎಲ್ ಕೆ ಮತ್ತು ಧನ್ಯಶ್ರೀ (9ನೇ ತರಗತಿ), ಆರೋಗ್ಯ ಸಚಿವರಾಗಿ ಯಶಸ್ ಮತ್ತು ಹಿತಾಶ್ರೀ (9ನೇ ತರಗತಿ), ವಿದ್ಯಾರ್ಥಿ ನಿಲಯದ (ಹಾಸ್ಟೆಲ್) ಸಚಿವರಾಗಿ ರೋಹಿತ್ ಕುಮಾರ್ ಎ ಮತ್ತು ಸೃಜನಾ ಕೆ ಸಿ (9ನೇ ತರಗತಿ), ಗ್ರಂಥಾಲಯ ಸಚಿವರಾಗಿ ವೈಷ್ಣವಿ ಕೆ ವೈ (9ನೇ ತರಗತಿ), ಕ್ರೀಡಾ ಸಚಿವರಾಗಿ ದೀಕ್ಷಿತ್ (9ನೇ ತರಗತಿ), ನೀರಾವರಿ ಸಚಿವರಾಗಿ ಅಧಿತಿ (9ನೇ ತರಗತಿ) ಆಯ್ಕೆಯಾದರು. ನೂತನವಾಗಿ ಆಯ್ಕೆಯಾದ ಮಂತ್ರಿಮಂಡಲದ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಶಾಲೆಯ ಪ್ರಾಂಶುಪಾಲರು ಪ್ರಮಾಣ ವಚನ ಬೋಽಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲ ಸತೀಶ ಟಿ ಮಾತನಾಡಿ ವಿದ್ಯಾರ್ಥಿಗಳು ಕರ್ತವ್ಯ ಪ್ರeಯೊಂದಿಗೆ ಕಾರ್ಯಗಳನ್ನು ಮಾಡಬೇಕು ಎಂದು ಶುಭ ಹಾರೈಸಿದರು. ಶಾಲಾ ಉಪಪ್ರಾಂಶುಪಾಲೆ ವಾಣಿ, ನಿಲಯ ಪಾಲಕ ವಸಂತ ಎಂ ಶುಭ ಹಾರೈಸಿದರು.

ಕೃಷ್ಣ ಕುಮಾರ್ ಕೆ ಬಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಜಯಪ್ರಕಾಶ ಪಿ, ಉಷಾ ಡಿ, ವಿನತಾ ಎಂ, ಬಾಲಕೃಷ್ಣ ಸಿ, ಸಂಜಯ್ ಭಡಾಕರ ಹಾಗೂ ಶಾಲಾ ಸಿಬ್ಬಂದಿಗಳಾದ ರೇಷ್ಮಾ ಜಿ ಕೆ, ಸೌಮ್ಯಲತಾ, ಕವಿತಾ ಜಿ ಡಿ, ಅನುಸೂಯ, ಕಲ್ಯಾಣಿ, ಮಂಜುಳಾ, ಜಯಂತಿ, ರಾಮಚಂದ್ರ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದರು. ೮ನೇ ತರಗತಿಯ ತನುಷ್ ಮತ್ತು ಲತೇಶ್ ಸ್ವಾಗತಿಸಿ, 9ನೇ ತರಗತಿಯ ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು. 8ನೇ ತರಗತಿಯ ನೀರಿಕ್ಷಾ ಮತ್ತು ವಂಶಿತಾ ವಂದಿಸಿದರು.

LEAVE A REPLY

Please enter your comment!
Please enter your name here