ಕೊೖಲ: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ-ಅಧ್ಯಕ್ಷೆ: ವಿದ್ಯಾವತಿ, ಕಾರ್ಯದರ್ಶಿ: ಜಯಲಕ್ಷ್ಮೀ, ಕೋಶಾಧಿಕಾರಿ: ಭವಾನಿ

0

ರಾಮಕುಂಜ: ಕಡಬ ತಾಲೂಕಿನ ಕೊೖಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಆ.28ರಂದು ನಡೆಯುವ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆಯಾಗಿ ವಿದ್ಯಾವತಿ ಪರಂಗಾಜೆ, ಕಾರ್ಯದರ್ಶಿಯಾಗಿ ಜಯಲಕ್ಷ್ಮೀ ಕಾಳಪ್ಪ ಗೌಡ ಹಾಗೂ ಕೋಶಾಧಿಕಾರಿಯಾಗಿ ಭವಾನಿ ಬರಮೇಲು ಅವರನ್ನು ಆಯ್ಕೆ ಮಾಡಲಾಯಿತು.


ಶ್ರೀ ವರಮಹಾಲಕ್ಷ್ಮೀ ಪೂಜೆಯ ಪೂರ್ವ ತಯಾರಿಗೆ ಸಮಿತಿ ರಚಿಸುವ ನಿಟ್ಟಿನಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಅರುವಾರಬಾಳಿಕೆ ಅವರ ಅಧ್ಯಕ್ಷತೆಯಲ್ಲಿ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಳಿದಂತೆ ಉಪಾಧ್ಯಕ್ಷರಾಗಿ ಸುಮನ ಸುನೀತ್‌ರಾಜ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ರಂಜಿತಾ ನೀರಜ್, ಸದಸ್ಯರಾಗಿ ಸಾವಿತ್ರಿ ಸಂಜೀವ ಸುದೆಂಗಳ, ಜ್ಯೋತಿ ಕಲ್ಕಾಡಿ, ಸುಜಾತ ಜೆ.ಶೆಟ್ಟಿ, ಮೀನಾಕ್ಷಿ ಕೊರಗಪ್ಪ, ಸತ್ಯಾವತಿ ಅವರನ್ನು ಆಯ್ಕೆ ಮಾಡಲಾಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಜೀವ ಸುದೆಂಗಳ, ಗೋಪಾಲ ನಾಯ್ಕ್, ಕಾರ್ಯದರ್ಶಿ ರಘುನಾಥ ಶೆಟ್ಟಿ ಕಲ್ಕಾಡಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯೆ ಮೀನಾಕ್ಷಿ ಕೊರಗಪ್ಪ ಸ್ವಾಗತಿಸಿ, ಸುಜಾತ ಜಯರಾಮ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here