






ಮುಖ್ಯ ಮಂತ್ರಿಯಾಗಿ ತನುಶ್ರೀ, ಉಪ ಮುಖ್ಯಮಂತ್ರಿಯಾಗಿ ಸಾನ್ವಿ


ನಿಡ್ಪಳ್ಳಿ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಂಡೂರು 1 ಇಲ್ಲಿಯ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು. ಮುಖ್ಯಮಂತ್ರಿ ಯಾಗಿ ತನುಶ್ರೀ ,ಉಪಮುಖ್ಯಮಂತ್ರಿಯಾಗಿ ಸಾನ್ವಿ ಇವರನ್ನು ಆರಿಸಲಾಯಿತು. ಗೃಹಮಂತ್ರಿಯಾಗಿ



ಶ್ರಾವಣಿ ,ಆರೋಗ್ಯಮಂತ್ರಿಯಾಗಿ ಆರಾಧನಾ, ಸ್ವಚ್ಛತಾ ಮಂತ್ರಿಯಾಗಿ ಸ್ಮಿತಾ, ಕ್ರೀಡಾ ಮಂತ್ರಿಯಾಗಿ ಹೂಸ್ಮಿತ, ಶಿಕ್ಷಣ ಮಂತ್ರಿಯಾಗಿ ಅಜ್ವ ಫಾತಿಮಾ, ನೀರಾವರಿ ಮಂತ್ರಿಯಾಗಿ ಧನ್ಯಶ್ರೀ ಇವರನ್ನು ಆರಿಸಲಾಯಿತು .ಚುನಾವಣಾ ಅಧಿಕಾರಿಗಳಾಗಿ ಮುಖ್ಯ ಗುರು ಆಶಾ ಎಸ್ ಕಾರ್ಯ ನಿರ್ವಹಿಸಿದರು. ಶಿಕ್ಷಕಿಯರಾದ ಸೌಮ್ಯ, ಭಾರತಿ, ಭವ್ಯ ಮತ್ತು ಸುಮಿತ್ರ ಸಹಕರಿಸಿದರು.










