







ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಕಳಾಯಿ ನಿವಾಸಿ ಮಳೇಲ ಶೇಖರ ಗೌಡ (72) ಅವರು ಜು.13ರಂದು ನಿಧನ ಹೊಂದಿದರು.


ಶೇಖರ ಗೌಡ ಅವರು ಉತ್ತಮ ಕಬಡ್ಡಿ ಆಟಗಾರರಾಗಿ, ಕ್ರಿಕೆಟ್ ಆಟಗಾರರಾಗಿ ಹೆಸರು ಮಾಡಿದ್ದರು. ಕೊಣಾಜೆ – ಮಾರಪ್ಪೆ ರಸ್ತೆ ನಿರ್ಮಾಣದಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಪುಸ್ತಕ, ಪತ್ರಿಕೆ ಓದುವ, ಬರೆಯುವ ಹವ್ಯಾಸ ಹೊಂದಿದ್ದ ಶೇಖರ ಅವರು ಹಲವಾರು ಪುಸ್ತಕಗಳನ್ನು ಸಂಗ್ರಹಿಸಿದ್ದರು. ಅವರು ಅವಿವಾಹಿತರಾಗಿದ್ದರು.



ಮೃತರು ಓರ್ವ ಸಹೋದರಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.










