ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಲಕ್ಷಕ್ಕೂ ಮಿಕ್ಕಿ ಮತಗಳನ್ನು ಪಡೆಯಲಿದ್ದಾರೆ: ಕುಕ್ಕಾಜೆ ಗುರೂಜಿ

0

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರು ಮಾಡಿರುವ ಕೆಲಸಗಳು ಮತ್ತು ಸಾಧನೆಗಳ ಕಾರಣಕ್ಕೆ ಮನೆ ಮಾತಾಗಿದ್ದಾರೆ ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದ್ದು ಪುತ್ತೂರು ಕ್ಷೇತ್ರದ ಮತದಾರ ಅವರಿಗೆ ಬೆಂಬಲ ನೀಡಲಿದ್ದು ಮುಂದಿನ ಚುನಾವಣೆಯಲ್ಲಿ ಲಕ್ಷಕ್ಕೂ ಮಿಕ್ಕಿ ಮತಗಳನ್ನು ಪಡೆಯಲಿದ್ದಾರೆ ಎಂದು ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯ ದೇವಸ್ಥಾನದ ಶ್ರೀಕೃಷ್ಣ ಗುರೂಜಿ ಭವಿಷ್ಯ ನುಡಿದಿದ್ದಾರೆ.


ಭಾನುವಾರ ರಾತ್ರಿ ಶ್ರೀ ಕ್ಷೇತ್ರಕ್ಕೆ ಶಾಸಕರು ಭೇಟಿ ನೀಡಿದ್ದರು. ಶ್ರೀ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಹಾಗೂ ಕ್ಷೇತ್ರಕ್ಕೆ ತೆರಳುವ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.


ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕ್ಷೇತ್ರಕ್ಕೆ ಬಂದಾಗ ಗೆದ್ದೇ ಗೆಲ್ತೀರಿ ಎಂದು ಹೇಳಿದ್ದೆ ಅದನ್ನು ದೇವರು ನಿಜ ಮಾಡಿದ್ದಾರೆ. ಇಂದು ಸುಲಭವಾಗಿ ಕೈಗೆ ಸಿಗುವ ಏಕೈಕ ಶಾಸಕ ಅಶೋಕ್ ರೈ ಅಂದ್ರೆ ಬಡವರ ಬಂಧು ಎಂಬುದು ಜಗಜ್ಜಾಹೀರಾಗಿದೆ. ಅವರು ಮಾಡುವ ಕೆಲಸ ಕಾರ್ಯಗಳು ಅವರಿಗೆ ಮುಂದೆ ಶ್ರೀ ರಕ್ಷೆಯಾಗಿ ನಿಲ್ಲಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿದ ಮತಗಳ ದುಪ್ಪಟ್ಟು ಮತಗಳು ಅವರಿಗೆ ಲಭಿಸಲಿದೆ, ಪುತ್ತೂರು ಕ್ಷೇತ್ರದ ಜನ ಅವರನ್ನು ಕೈ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಅಶೋಕ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ,ಪುತ್ತೂರು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಾಳೆಕಲ್ಲು, ಮಾಣಿಲ ವಲಯ ಕಾಂಗ್ರೆಸ್ ಅಧ್ಯಕ್ಷ ವಿಷ್ಣುಭಟ್, ಜಯರಾಂ ಬಳ್ಳಾಲ್, ಜಗನ್ನಾಥ ಶೆಟ್ಟಿ ನಡುಮನೆ , ಉಸ್ತುವಾರಿ ಶಮೀರ್ ಮತ್ತಿತರರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here