






ಪುತ್ತೂರು: ಬೊಳುವಾರು ಜಂಕ್ಷನ್ ಸಮೀಪದ ಸುಜುಕಿ ಟು ವೀಲರ್ ಶೋರೂಮ್ ಎದುರುಗಡೆ ನೈವಾಸ್ ಕೆಫೆ ಮತ್ತು ಕಿಚನ್ ಜು.15ರಂದು ಶುಭಾರಂಭಗೊಳ್ಳಲಿದೆ.


ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಾಧವ ಎಸ್. ಮಾವೆ, ಪುತ್ತೂರು ಗಾಣಿಗ ಯಾನೆ ಸಪಲಿಗರ ಸೇವಾ ಸಂಘದ ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ, ಸ್ವಾತಿ ಆಕೃತಿ ವೆಲ್‌ನೆಸ್ ಮಾಲಕಿ ಸ್ವಾತಿ ಬಿ. ಶೆಟ್ಟಿ, ನಿಶಾಂತ್ ಆಯಿಲ್ ಸೆಂಟರ್ ಮಾಲಕ ಎಂ.ಎನ್.ಕುಮಾರ್ ಭಾಗವಹಿಸಲಿದ್ದಾರೆ ಎಂದು ಮಾಲಕರಾದ ಇಂದಿರಾ ಬಾಬು ಸಪಲ್ಯ ದೇವಸ್ಯ, ಮಧುಸೂದನ ಮತ್ತು ದೀಪಿಕಾರವರು ತಿಳಿಸಿದ್ದಾರೆ.













