







ಪುತ್ತೂರು: ಇತ್ತೀಚೆಗೆ ನಿಧನರಾದ ತೆಂಕಿಲ ಶ್ರೇಯ ನಿಲಯದ ರುಕ್ಮಯ್ಯ ಗೌಡ ಪುಣಚ ಗುರ್ಮೆಯವರ ಶ್ರದ್ಧಾಂಜಲಿ ಸಭೆಯು ಕೊಂಬೆಟ್ಟು ಬಂಟರಭವನ ಸಭಾಭವನದಲ್ಲಿ ಜು.14ರಂದು ನಡೆಯಿತು. ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಜನಾರ್ದನ ಗೌಡ ಕೊಲೆಂಜಿರೋಡ್ ಸುಳ್ಯ ರವರು ಮೃತರ ಜೀವನ ಪರಿಚಯದ ಮೂಲಕ ನುಡಿನಮನ ಸಲ್ಲಿಸಿದರು. ನಂತರ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.



ಮೃತರ ಪತ್ನಿ ನಿವೃತ್ತ ಶಿಕ್ಷಕಿ ಕಮಲ ಬಿ, ಪುತ್ರಿಯರಾದ ಯಶಸ್ವಿ ಎಸ್.ಆರ್., ಶ್ರೇಯಸ್ವಿ ಎಸ್ ಆರ್, ಅಳಿಯಂದಿರಾದ ಸನಲ್ ಕುಮಾರ್, ಅನೂಪ್ ಕೆ.ಜೆ, ಮೊಮ್ಮಕ್ಕಳಾದ ಸೋಹನ್ ಶ್ರೀಯಾನ್, ದಿಯಾನ್ ತಕ್ಷ್, ಇಶಾಲಕ್ಷ್ಮೀ, ಕುಟುಂಬಸ್ಥರು, ಬಂಧುಮಿತ್ರರು, ವಿವಿಧ ರಾಜಕೀಯ ಗಣ್ಯರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.













