






ಪುತ್ತೂರು: ರಾಮಕ್ಷತ್ರೀಯ ಸೇವಾ ಸಂಘದ ಆಶ್ರಯದಲ್ಲಿ ವನಮಹೋತ್ಸವದ ಪ್ರಯುಕ್ತ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು. ಸಂಘದ ಹಿರಿಯರಾದ ಉಮೇಶ್ ರಾವ್ ಅವರು ಸಸಿಗಳನ್ನು ಸಂಘದ ಅಧ್ಯಕ್ಷ ಅರುಣ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಅಧ್ಯಕ್ಷರು ಸಮಾಜ ಬಾಂಧವರಿಗೆ ಸಸಿಗಳನ್ನು ವಿತರಿಸಿ ಅದರ ಬಗ್ಗೆ ಮಾಹಿತಿ ನೀಡಿದರು. ರಾಮಕ್ಷತ್ರೀಯ ಸಮಾಜದ ಅಧ್ಯಕ್ಷ ಅರುಣ್ ಕುಮಾರ್, ಯುವ ಸಂಘದ ಅಧ್ಯಕ್ಷ ಧೀರಜ್, ಕಾರ್ಯದರ್ಶಿಗಳಾದ ರಾಜೇಂದ್ರ ಸಿಎಚ್, ಜಯಮಾಲ, ವಲ್ಲೀಶ್ ಉಪಸ್ಥಿತರಿದ್ದರು.












