ಬಿಜೆಪಿಯ ಹಿರಿಯ ಕಾರ್ಯಕರ್ತ ಶಾಂತಿಮಾರು ನಾರಾಯಣ ಗೌಡ ನಿಧನ

0

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ನಿವಾಸಿ, ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಶಾಂತಿಮಾರು ನಾರಾಯಣ ಗೌಡ ಅವರು ಜು. 16 ರಂದು ನಿಧನರಾಗಿದ್ದಾರೆ.

ಅವರು ಜನಸಂಘದ ಕಾಲದಿಂದಲೇ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಆರ್.ಎಸ್.ಎಸ್ ನ ಸ್ವಯಂಸೇವಕರಾಗಿಯೂ ಕೆಲಸ ಮಾಡಿದ್ದರು. ಪಕ್ಷದ ಹಿರಿಯರಲ್ಲಿ ಒಬ್ಬರಾಗಿದ್ದರು.ಕಠಿಣ ಪರಿಶ್ರಮಿ, ಸರಳ ಜೀವನ ಮತ್ತು ನಿಸ್ವಾರ್ಥ ಸೇವೆಯಿಂದ ಗ್ರಾಮದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರಗತಿಪರ ಕೃಷಿಕರೂ ಆಗಿದ್ದರು.

ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.

LEAVE A REPLY

Please enter your comment!
Please enter your name here