ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲೂ ಯಶಸ್ವಿನಿ ಯೋಜನೆ ಸೌಲಭ್ಯ

0

ಮನವಿಗೆ ಶಾಸಕರು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದು ಸಾರ್ಥಕ – ದಿನೇಶ್ ಹೆಗ್ಡೆ


ಪುತ್ತೂರು; ಕರ್ನಾಟಕ ಸರ್ಕಾರದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ಲಭ್ಯದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27 ಆಸ್ಪತ್ರೆಗಳು ನೋಂದಾವಣೆ ಮಾಡಿಕೊಂಡಿದ್ದು ಪುತ್ತೂರಿನಲ್ಲಿ ಎರಡು ಆಸ್ಪತ್ರೆಗಳು ನೋಂದಾವಣೆ ಮಾಡಿಕೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಹೆಗ್ಡೆ ತಿಳಿಸಿದ್ದಾರೆ.


ಯಶಸ್ವಿನಿ ಯೋಜನೆಯಡಿ ನೋಂದಾವಣೆ ಮಾಡಿಕೊಳ್ಳಲು ಬಹುತೇಕ ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದರು. ಪುತ್ತೂರಿನ ಯಾವುದೇ ಆಸ್ಪತ್ರೆ ಈ ಯೋಜನೆಯಡಿಯಲ್ಲಿರಲಿಲ್ಲ. ಈ ಕುರಿತು ನಾನು ಪುತ್ತೂರು ಶಾಸಕರಿಗೆ ಮನವಿ ಮಾಡಿದ್ದೆ. ಅವರು ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು. ಇದರ ಫಲವಾಗಿ ದಕ್ಷಿಣ ಕನ್ನಡದ 27 ಆಸ್ಪತ್ರೆಗಳಿಗೆ ಯಶಸ್ವಿನಿ ಯೋಜನೆ ಬಂದಿದೆ. ಪುತ್ತೂರಿನ ದರ್ಬೆ ಹಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರಸಾದ ನೇತ್ರಾಲಯ ಯಶ್ವಿನಿ ಯೋಜನೆಯನ್ನು ನೋಂದಾಯಿಸಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here