







ಉಪ್ಪಿನಂಗಡಿ: ಕಣಿಯೂರು ಗ್ರಾಮ ಪದ್ಮುಂಜ, ಕೊರಿಂಜ ಸಮೀಪದ ಅಡೆಂಜ ಎಂಬಲ್ಲಿ ಖೋಟಾನೋಟು ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ ಘಟನೆ ಜು.15ರಂದು ತಡರಾತ್ರಿ ನಡೆದಿದೆ.



ಖೋಟಾನೋಟು ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಖೋಟಾನೋಟು ತಯಾರಿಸಲು ಬಾಡಿಗೆ ಕಟ್ಟಡ ಒದಗಿಸಿದ ಸ್ಥಳೀಯ ವ್ಯಕ್ತಿ ಸಿರಾಜ್ ಸಹಿತ ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.




ಒಂದು ಬದಿ ಪ್ರಿಂಟ್ ಮಾಡಿರುವ ಖೋಟಾನೋಟು ಸಹಿತ ಖೋಟಾನೋಟು ತಯಾರಿಕೆಗೆ ಬಳಸಿರುವ ಮೆಷಿನ್ ಅನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.










