







ಬೆಟ್ಟಂಪಾಡಿ: 9ನೇ ವರ್ಷದ ಗೋಕುಲಾಷ್ಟಮಿ ಆಚರಣೆಯ ಅಂಗವಾಗಿ ಪೂರ್ವಭಾವಿ ಸಭೆಯು ಇಲ್ಲಿನ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಜು. 14 ರಂದು ಆಯೋಜಿಸಲಾಯಿತು. ಶಾಲಾ ಸಂಚಾಲಕ ಡಾ. ಸತೀಶ್ ರಾವ್, ಪಿಟಿಎ ಅಧ್ಯಕ್ಷ ಅನಿಲ್ ಕುಮಾರ್ ಕನ್ನಡ್ಕ ರವರ ಉಪಸ್ಥಿತಿಯಲ್ಲಿ ಗೋಕುಲಾಷ್ಟಮಿ ಆಚರಣೆಯ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.


ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಜನಾರ್ಧನ ಪೂಜಾರಿ ಪದಡ್ಕ ಅವರನ್ನು ಅಧ್ಯಕ್ಷರಾಗಿ ಹಾಗೂ ದೀಪ್ತಿ ರೈ ಮಿನಿಪದವು ಅವರನ್ನು ಉಪಾಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಗಳಾಗಿ ಶಾಲಾ ಮುಖ್ಯಗುರು ರಾಜೇಶ್ ಎಂ ಇವರನ್ನು ಆಯ್ಕೆ ಮಾಡಲಾಯಿತು.



ಗೋಕುಲಾಷ್ಟಮಿ ಸಮಿತಿಯ ಸದಸ್ಯರಾಗಿ ವಿಜಯಲಕ್ಷ್ಮಿ ಅಜ್ಜಿಕಲ್ಲು, ಭವಾನಿ ಶಂಕರ್ ಸ್ವರ್ಗ, ಸ್ವಾತಿ ಕರ್ನಪಾಡಿ, ರಮ್ಯಾ, ಪುರುಷೋತ್ತಮ ಪರ್ಪುಂಜ,ಚೈತ್ರ ರೆಂಜ,ಸಂಧ್ಯಾ ಮರಿಕೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪೋಷಕ ಬಂಧುಗಳು ಭಾಗವಹಿಸಿ ತಮ್ಮ ಸಹಕಾರ ವ್ಯಕ್ತಪಡಿಸಿದರು. ಗೋಕುಲಾಷ್ಟಮಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಿ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲಾಯಿತು.










