






ಪುತ್ತೂರು : ಬಂಟ್ವಾಳದ ಲಾವಣ್ಯ ಅವರ ಹತ್ಯೆ ಜನರನ್ನು ಬೆಚ್ಚಿಬೀಳಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಹೆಣ್ಣು ಮಕ್ಕಳು ಒಂಟಿಯಾಗಿ ಓಡಾಡಲು ಭಯಪಡುವಂತ ವಾತಾವರಣ ಸೃಷ್ಟಿಯಾಗಿದೆ. ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೀಕರ ಹತ್ಯೆ ಆಗಿರುವಂತದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಗೃಹಮಂತ್ರಿಗಳು ಆರ್.ಎಸ್.ಎಸ್.ನ ವಿಚಾರವಾಗಿ ಮಾತುಗಳನ್ನು ಆಡುತ್ತಾ ದಿನನಿತ್ಯ ಪ್ರಚಾರ ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯದ ಕಾನೂನು ಸುವ್ಯವಸ್ಥೆ ಸಂರ್ಪೂಣವಾಗಿ ವಿಫಲವಾಗಿದೆ. ಇನ್ನು ಮುಂದೆಯಾದರು ಕರ್ನಾಟಕ ರಾಜ್ಯ ಸರ್ಕಾರದ ಗೃಹಮಂತ್ರಿಗಳು ತಮ್ಮ ರಾಜ್ಯದ ಬಗ್ಗೆ ಎಚ್ಚರವಹಿಸಿಕೊಂಡು ಹೋದರೆ ಒಳ್ಳೆಯದು. ನಮ್ಮ ಕಾನೂನು ವ್ಯವಸ್ಥೆಗೆ ಆದ್ಯತೆಯನ್ನು ಕೊಟ್ಟರೆ ಮಾತ್ರ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆ. ಕಾನೂನು ಎಂದರೆ ಎಲ್ಲರೂ ಕೂಡ ಭಯಪಡುವಂತಿರಬೇಕು, ಇವತ್ತು ಹಾಡುಹಗಲೇ ಈ ಹತ್ಯೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಭವಿಷ್ಯಕ್ಕೆ ಕಪ್ಪು ಚುಕ್ಕೆಯಾಗಿದೆ. ಉಸ್ತುವಾರಿ ಸಚಿವರು ಸುಮ್ಮನೆ ಕುಳಿತ್ತಿದ್ದಾರೆ.ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಬೇಕಿದೆ.


ಮಾಧವ ಮಾವೆ,ವಕ್ತಾರರು,ಭಾರತೀಯ ಜನತಾ ಪಾರ್ಟಿ ದ.ಕ ಜಿಲ್ಲೆ













