







ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರವಣರಂಗ ಪ್ರತಿಷ್ಠಾನ ಸವಣೂರು ಇದರ ಸಂಯುಕ್ತ ಯೋಜನೆಯಲ್ಲಿ ಹಮ್ಮಿಕೊಂಡ “ಯಕ್ಷಾಷಾಡ” ವಿಶಿಷ್ಟ ಕಾರ್ಯಕ್ರಮದ ಪ್ರಾರಂಭೋತ್ಸವವು ಸರ್ವೆ ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ಜು.16ರಂದು ಸುದರ್ಶನ ವಿಜಯ ಎಂಬ ಆಖ್ಯಾನದ ಪ್ರಸ್ತುತಿಯೊಂದಿಗೆ ಸಂಪನ್ನಗೊಂಡಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೇನೇರಂಕಿ, ಸತೀಶ್ ಇರ್ದೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಸಮರ್ಥ ವಿಷ್ಣು ಕಡಂಬಳಿಕೆ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ, ಗುಂಡ್ಯಡ್ಕ ಈಶ್ವರ ಭಟ್ (ಮಹಾವಿಷ್ಣು), ಭಾಸ್ಕರ ಬಾರ್ಯ (ಲಕ್ಷ್ಮೀ), ಗುಡ್ಡಪ್ಪ ಬಲ್ಯ (ಸುದರ್ಶನ), ಸುಬ್ಬಪ್ಪ ಕೈಕಂಬ(ಶತ್ರುಪ್ರಸೂದನ), ತಾರಾನಾಥ ಸವಣೂರು (ದೇವೇಂದ್ರ),ಭಾರತಿ ರೈ ಅರಿಯಡ್ಕ (ದೇವದೂತ) ಸಹಕರಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು.ಉಭಯ ಸಂಘಗಳ ವತಿಯಿಂದ ದೇವಳದ ಆಡಳಿತ ಮೊಕ್ತೇಸರ ಚಂದು ಗೌಡರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೇವಳದ ಅರ್ಚಕ ವೃಂದ ಹಾಗೂ ಸಂಯೋಜಕಿ ಯಮುನಾ ಕಲ್ಪಣೆ ಸಹಕರಿಸಿದರು.ದೇವಳದ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು.













