ಕೆಮ್ಮಿಂಜೆ ಗ್ರಾಮದಲ್ಲಿ ಒಕ್ಕಲಿಗರ ಜನಗಣತಿ ಕಾರ್ಯಕ್ಕೆ ಸಿದ್ಧತೆ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಒಕ್ಕಲಿಗ ಗೌಡ ಸಮಾಜದ ಜನಗಣತಿ ಕಾರ್ಯವನ್ನು ನಡೆಸಲು ಸಿದ್ಧತೆ ನಡೆಸಲಾಗಿದ್ದು, ಇತ್ತೀಚೆಗೆ ಜನಗಣತಿ ಪುಸ್ತಕವನ್ನು ತಾಲೂಕು ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಅವರು ಕೆಮ್ಮಿಂಜೆ ಗ್ರಾಮದ ಅಧ್ಯಕ್ಷ ಸೂರಪ್ಪ ಗೌಡರಿಗೆ ಹಸ್ತಾಂತರಿಸಿದರು.


ಪುಳಿತ್ತಡಿ ನಿವಾಸಿ ವಸಂತಿ ಎಂಬವರ ಮನೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಧರ್ ಗೌಡ ಪಾಣತ್ತಿಲ, ಶ್ರೀಧರ ಕಣಜಾಲು, ರಾಧಾಕೃಷ್ಣ ನಂದಿಲ, ರವಿ ಮುಂಗ್ಲಿಮನೆ, ಗ್ರಾಮ ಸಮಿತಿ ಪದಾಧಿಕಾರಿಗಳಾದ ಕುದ್ವ ಲೋಕನಾಥ ಗೌಡ, ಲೋಕೇಶ್ ಗೌಡ, ರೇಖಾ, ಪುಷ್ಪಾವತಿ, ಸ್ವಸಹಾಯ ಸಂಘದ ಸದಸ್ಯರು, ಸಿಬ್ಬಂದಿಗಳಾದ ಸುಮಲತಾ ಮತ್ತು ಪುಷ್ಪ ಉಪಸ್ಥಿತರಿದ್ದರು. ಬಳಿಕ ಕೆಮ್ಮಿಂಜೆ ಗ್ರಾಮದ ಒಕ್ಕಲಿಗ ಸ್ವಸಹಾಯ ಸಂಘದ ತ್ರೈಮಾಸಿಕ ಸಭೆಯು ಕುದ್ವ ಲೋಕನಾಥ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here