ಕುಂಬ್ರದಲ್ಲಿ ಸ್ಪಂದನಾ ಸೇವಾ ಬಳಗದಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ: ನೂತನ ಸಮಿತಿ ರಚನೆ

0

ಅಧ್ಯಕ್ಷೆ: ಮಲ್ಲಿಕಾ ಸುಂದರ್ ರೈ, ಪ್ರ. ಕಾರ್ಯದರ್ಶಿ: ಪ್ರೀತಾ ನೇಮಿರಾಜ್ ಕುರಿಕ್ಕಾರ, ಕೋಶಾಧಿಕಾರಿ: ನಮಿತಾ ಕೋರಿಕ್ಕಾರು


ಪುತ್ತೂರು : ಸ್ಪಂದನಾ ಸೇವಾ ಸಮಿತಿ ಕುಂಬ್ರ ಇದರ ಸಹಯೋಗದೊಂದಿಗೆ ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ ಆ. 28ರಂದು ನಡೆಯಲಿರುವ ಪ್ರಥಮ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಯಶಸ್ವಿ ಆಯೋಜನೆಗಾಗಿ ನೂತನ ಸಮಿತಿ ರಚಿಸುವ ಉದ್ದೇಶದಿಂದ ಸಭೆ ನಡೆಯಿತು.


ಸಭೆಯಲ್ಲಿ ಸ್ಪಂದನಾ ಸೇವಾ ಬಳಗದ ಗೌರವಾಧ್ಯಕ್ಷರಾದ ರತನ್ ರೈ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಬಳಿಕ ಸ್ಪಂದನಾ ಸೇವಾ ಬಳಗದ ಅಧ್ಯಕ್ಷರಾದ ಅಶೋಕ್ ತ್ಯಾಗರಾಜನಗರ ಅವರು ವರಮಹಾಲಕ್ಷ್ಮಿ ಪೂಜಾ ಸಮಿತಿಯ ರಚನೆ ಕುರಿತು ಪ್ರಸ್ತಾಪ ಮಂಡಿಸಿದರು.


ಚುನಾವಣಾ ಅಧಿಕಾರಿಗಳಾಗಿ ಸ್ಪಂದನಾ ಸೇವಾ ಬಳಗದ ಗೌರವಾಧ್ಯಕ್ಷರಾದ ಸುಧಾಕರ ರೈ ಕುಂಬ್ರ ಹಾಗೂ ಕಾರ್ಯಾಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ ಕಾರ್ಯನಿರ್ವಹಿಸಿದರು. ಸಭೆಯಲ್ಲಿ ನೂತನ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಸಮಿತಿಯ ಅಧ್ಯಕ್ಷರಾಗಿ ಮಲ್ಲಿಕಾ ಸುಂದರ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೀತಾ ನೇಮಿರಾಜ್ ಕುರಿಕ್ಕಾರ, ಉಪಾಧ್ಯಕ್ಷರಾಗಿ ಭಾರತಿ ರೈ ಅರಿಯಡ್ಕ ಹಾಗೂ ಉಷಾ ನಾರಾಯಣ ಉರುವ, ಜೊತೆ ಕಾರ್ಯದರ್ಶಿಗಳಾಗಿ ಸುಕನ್ಯಾ ಜಗದೀಶ್ ಮತ್ತು ಕವಿತಾ ಹರೀಶ್ ಜಾರತ್ತಾರು, ಕೋಶಾಧಿಕಾರಿಯಾಗಿ ನಮಿತಾ ಕೋರಿಕ್ಕಾರು ಆಯ್ಕೆಯಾದರು.


ಸ್ವಾಗತ ಸಮಿತಿಯ ಸಂಚಾಲಕರಾಗಿ ಪ್ರಮೀಳಾ ಎಸ್. ಪರ್ಪುಂಜ, ಸಹ ಸಂಚಾಲಕರಾಗಿ ವಿನೋದಾ ಮಗಿರೆ, ವೈದಿಕ ಸಮಿತಿಯ ಸಂಚಾಲಕರಾಗಿ ಯಶೋಧ ಆಚಾರ್ಯ, ಸಹ ಸಂಚಾಲಕರಾಗಿ ಅನಿತಾ ಶಾಂತಿವನ, ರಾಜೀವಿ ಕುಂಬ್ರ ಹಾಗೂ ಆಶಾ ರೈ ಕುಂಬ್ರ ಆಯ್ಕೆಯಾದರು.


ಪ್ರಸಾದ ವಿತರಣಾ ಸಮಿತಿಯ ಸಂಚಾಲಕರಾಗಿ ಸುಮಲತಾ ಮಗಿರೆ, ಸಹ ಸಂಚಾಲಕರಾಗಿ ಚಂದ್ರಾವತಿ ಉರುವ ಹಾಗೂ ನವೀನಾಕ್ಷಿ ಮಗಿರೆ ನೇಮಕಗೊಂಡರು. ಆಹಾರ ಸಮಿತಿಯ ಸಂಚಾಲಕರಾಗಿ ಚಂದ್ರಕಲಾ ಆಚಾರ್ಯ, ಸಹ ಸಂಚಾಲಕರಾಗಿ ಶಿಲ್ಪಾ ಪವನ್ ಮತ್ತು ಹರ್ಷಿತಾ ಪ್ರಶಾಂತ್ ಆಯ್ಕೆಯಾದರು.


ಈ ಸಂದರ್ಭದಲ್ಲಿ ನೇಮಿರಾಜ್ ಕುಂಬ್ರ, ಪದ್ಮನಾಭ ಗೌಡ ಮುಂಡಾಲ, ಸಂತೋಷ್ ಮಣಿಯಾಣಿ ಕುತ್ಯಾಡಿ, ಹರೀಶ್ ರೈ ಜಾರತ್ತಾರು, ಚಂದ್ರ ಇದ್ಪಾಡಿ, ಅರುಣ್ ಬಿಜಲ, ಶರತ್ ಗೌಡ ಗುತ್ತು, ಗಣೇಶ್ ಕೋಡಿಬೈಲು, ನಾರಾಯಣ ಪೂಜಾರಿ ಕುರಿಕ್ಕಾರ ಹಾಗೂ ಸುಧಾಕರ ಆಳ್ವ ಸೇರಿದಂತೆ ಹಲವರು ಉಪಸ್ಥಿತರಿದ್ದು ನೂತನ ಸಮಿತಿಗೆ ಶುಭ ಹಾರೈಸಿದರು.
ಸಭೆಯ ಅಂತ್ಯದಲ್ಲಿ ಆಗಸ್ಟ್ 28ರಂದು ನಡೆಯಲಿರುವ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನಡೆಸಲು ಎಲ್ಲರೂ ಸಹಕರಿಸುವಂತೆ ಕರೆ ನೀಡಲಾಯಿತು.

LEAVE A REPLY

Please enter your comment!
Please enter your name here