ಸವಣೂರುಗುತ್ತು ಕುಸುಮಲತ ಎನ್ ರೈಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಪುತ್ತೂರು : ದಿ.ವೈದ್ಯ ಡಾ.ಕೆ. ದಾಸಪ್ಪ ರೈ ಮತ್ತು ದಿ.ಸವಣೂರುಗುತ್ತು ಸೀತಮ್ಮ ರೈ ದಂಪತಿಗಳ ಹಿರಿಯ ಪುತ್ರಿ , ಸವಣೂರು ಗುತ್ತಿನ ಹಿರಿಯ ಸದಸ್ಯೆ ದಿ. ಎಣ್ಮಕಜೆ ಪಟೇಲ್ ನಾರಯಣ ರೈ ಇವರ ಪತ್ನಿ ಶ್ರೀಮತಿ ಕುಸುಮಲತ ಎನ್ ರೈ ಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ ಜು.18 ರಂದು ಮಧ್ಯಾಹ್ನ ಇಲ್ಲಿನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯ ಇದರ ನೇತ್ರಾವತಿ ಸಭಾಂಗಣದಲ್ಲಿ ಸವಣೂರು ಕುಟುಂಬದ ಪಿ .ಸೀತಾರಾಮ ರೈ ಇವರು ಮೃತರ ಉತ್ತರ ಕ್ರಿಯಾದಿ ವಿಧಿವಿಧಾನ ನೆರವೇರಿಸಿದರು.


ಮಾಜಿ ಶಾಸಕಿ ಹಾಗೂ ದಿ. ಕುಸುಮಲತ ರೈ ಯವರ ಹತ್ತಿರದ ಸಂಬಂಧಿ ಶ್ರೀಮತಿ ಶಕುಂತಲಾ ಶೆಟ್ಟಿ ಮಾತನಾಡಿ , ಮೃತರ ಜೊತೆಗಿನ ಒಡನಾಟದ ಸಿಹಿ – ಸುಂದರ ನೆನಪುಗಳನ್ನು ಹಂಚಿಕೊಂಡರು. ಅವರ ಆದರ್ಶಗಳು , ನೀಡಿರುವ ಮಾರ್ಗದರ್ಶನವೆಲ್ಲಾವೂ ನಮಗೆಲ್ಲರಿಗೂ ಸದಾ ದಾರಿದೀಪವಾಗಿರಲಿಯೆಂದು ಗುಣಗಾನ ಮಾಡಿದರು. ಬಳಿಕ ಎಲ್ಲರೂ ಸೇರಿ ಮೌನ ಪ್ರಾರ್ಥನೆ ನೆರವೇರಿಸಿ , ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಸಲ್ಲಿಸಿದರು.


ಮಾಜಿ ಸಚಿವ ರಮಾನಾಥ ರೈ , ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸವಣೂರು ಗುತ್ತಿನ ವಿಶ್ವಜೀತ್ ಶೆಟ್ಟಿ , ಡಾ.ರತನ್ ಶೆಟ್ಟಿ , ಡಾ.ರಮೇಶ್ ಶೆಟ್ಟಿ ,ವೆಂಕಪ್ಪ ಶೆಟ್ಟಿ ,ಮೋಹನ್ ದಾಸ್ ಶೆಟ್ಟಿ ,ಸವಣೂರು ಸೀತಾರಾಮ ರೈ ,ಡಾ. ಬೆಳ್ಳಿಪ್ಪಾಡಿ ಶ್ಯಾಮ್ ಪ್ರಸಾದ ಶೆಟ್ಟಿ ಮೈಸೂರು , ಕೊಯಂಬತ್ತೂರಿನ ಉದ್ಯಮಿ ರಮಾನಂದ ಶೆಟ್ಟಿ -ಸವಿತಾ ಆರ್ ಶೆಟ್ಟಿ ದಂಪತಿ , ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ,ಕೊಲ್ಲೂರು ದೇವಾಲಯದ ಮಾಜಿ ಮೊಕ್ತೇಸರ ಕೃಷ್ಣ ಪ್ರಸಾದ್ ಅಡ್ಯಂತಾಯ , ಉದ್ಯಮಿಗಳಾದ ಚಿಕ್ಕಪ್ಪ ನಾಯ್ಕ್ , ಪ್ರಭಾಕರ ಶೆಟ್ಟಿ ,ಕಿನಾರ ಪ್ರಸಾದ ರೈ , ಅಜಿತ್ ರೈ ಸಂಕೇಶ ಕುರಿಯ ,ಏಷ್ಯಾನ್ ವುಡ್ ಮಾಲೀಕ ಕೆ ಎಂ ಇಸ್ಮಾಯಿಲ್ , ಶ್ರೀ ಮಹಾಲಿಂಗೇಶ್ವರ ಐಟಿಐ ಸಂಚಾಲಕ ರಾಮಕೃಷ್ಣ ಗೌಡ , ಸುದ್ದಿ ಸೌಹಾರ್ದ ಸಹಕಾರಿ ನಿರ್ದೇಶಕ ಗುಮ್ಮಣ್ಣ ಗೌಡ ಮತ್ತು ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಇವರೆಲ್ಲರೂ ಹಾಜರಿದ್ದು ,ಸವಣೂರು ಕುಟುಂಬಸ್ಥರ ಪರವಾಗಿ ಪಿ.ತುಕಾರಾಂ ರೈ ಮೈಸೂರು, ಮೃತರ ಪರಿಚಯ ನೀಡಿದರು. ಸಹೋದರಿ ಸುಮಾಲಿನಿ ಪಕ್ಕಳ ಮತ್ತು ಅಮೇರಿಕಾದಲ್ಲಿ ವೈದ್ಯಾರಾಗಿರುವ ಇವರ ಪತಿ ಡಾ.ನಿತ್ಯಾನಂದ ಪಕ್ಕಳ ಹಾಗೂ ಮೃತರ ಸಹೋದರಿಯರ ಮಕ್ಖಳಾದ ಶ್ರೀಮತಿ ಅನುರಾಧ ಹೆಗ್ಡೆ ನ್ಯೂಜಿಲೆಂಡ್ , ವೈದ್ಯೆ ಡಾ. ರೇಷ್ಮಾ ಸವಣೂರು ಸಹಿತ ಹಿತೈಷಿಗಳೂ ಮತ್ತು ಬಂಧುಬಳಗ ಕುಟುಂಬ ವರ್ಗದ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here