






ಉಪ್ಪಿನಂಗಡಿ: ನೆಕ್ಕಿಲಾಡಿ ಶ್ರೀಗುರು ರಾಘವೇಂದ್ರ ಮಠದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆಯು ಜು.19ರಂದು ಮಠದಲ್ಲಿ ನಡೆಯಿತು.


ನೂತನ ಸಮಿತಿಯ ಅಧ್ಯಕ್ಷರಾಗಿ ಅನಿತಾ ಉದಯ ಕುಮಾರ್, ಕಾರ್ಯದರ್ಶಿಯಾಗಿ ಶಯನ ಪ್ರವೀಣ, ಜೊತೆ ಕಾರ್ಯದರ್ಶಿಯಾಗಿ ಪ್ರಜ್ಞಾ ಶೆಟ್ಟಿರವರುಗಳನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ವೈಶಾಲಿ ಮಹೇಶ್, ಆಶಾ ಸದಾನಂದ, ವಾಣಿ, ಯಶೋಧಾ, ಕಾಮಾಕ್ಷಿ ಹೆಗ್ಡೆ, ವಸುಧಾ ಉಪಾಧ್ಯಾಯ, ವಿಮಲಕೃಷ್ಣ, ಶೈಲಜ, ಸ್ವಪ್ನ ಭಟ್, ಅನುಷಾ, ಭುವನೇಶ್ವರಿ ರೈ, ಸುಜಾತ, ರಶ್ಮಿರವರುಗಳನ್ನು ಆಯ್ಕೆ ಮಾಡಿ ವಿವಿಧ ಜವಾಬ್ದಾರಿಗಳನ್ನು ನೀಡಲಾಯಿತು. ಸಭೆಯಲ್ಲಿ ಹಿಂದಿನ ವರ್ಷದ ಪೂಜಾ ಉತ್ಸವದ ಲೆಕ್ಕಪತ್ರವನ್ನು ಮಂಡಿಸಿ, ಈ ವರ್ಷದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸುವ ಬಗ್ಗೆ ಚರ್ಚಿಸಲಾಯಿತು.
ಪ್ರಜ್ಞಾ ಶೆಟ್ಟಿ ವಂದಿಸಿದರು. ವೈಶಾಲಿ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.













